ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘಟನೆಗಳು ಸಾಮಾಜಿಕ ಜವಾಬ್ದಾರಿ, ವಿಶೇಷ ಕಳಕಳಿಯ ಮೂಲಕ ಕಾರ್ಯನಿರ್ವಹಿಸಿ ಗುರುತಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ರಹಿಮಾನ ಕಣಕಾಲ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ವತಿಯಿಂದ ನೂತನ ಪದಾಧಿಕಾರಿಗಳಿಗೆ ಸದಸ್ಯತ್ವ ಅಭಿಯಾನ ಹಾಗೂ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಟನೆಗಳು ನಿತ್ಯ ನಿರಂತರ ಕಾಯಕನಿಷ್ಠೆಯಲ್ಲಿರಬೇಕು. ಪಕ್ಷಬೇದ ಮರೆತು, ಜಾತ್ಯಾತೀತ ಮನೋಭಾವನೆಯಿಂದ ಸಂಘಟಿಸಿ ಸರ್ವ ಸಮುದಾಯಕ್ಕೂ ಸಹಕಾರಿಯಾಗಬೇಕು. ಹುದ್ದೆಗಳಿಗಾಗಿ ಸಂಘಟನೆಗೆ ಸೇರದೆ ಸಮಾಜಮುಖಿ ಚಿಂತನೆ ನಮ್ಮಲ್ಲಿರಬೇಕು ಎಂದರು.
ಕಾರ್ಯಧ್ಯಕ್ಷ ಭೀಮನಗೌಡ ನಾಗರಾಳ ಮಾತನಾಡಿ, ಇಡೀ ರಾಜ್ಯದಲ್ಲಿ ಕ್ರೀಯಾಶೀಲವಾಗಿ ನಮ್ಮ ಪ್ರವೀಣಶೆಟ್ಟಿ ಬಣದ ಕರವೇ ಬಳಗ ಕಾರ್ಯ ನಿರ್ವಹಿಸುತ್ತಿದೆ. ಕರವೇ ಹೆಸರನ್ನು ಯಾರು ದುರ್ಬಳಕೆ ಮಾಡಿಕೊಳ್ಳಬಾರದು. ಸಾಮಾಜಿಕ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲಬೇಕು. ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಸಾರ್ವಜನಿಕರಿಗೆ ತಲುಪುವಂತಾಗಲು ಸಂಘಟನೆಗಳು ಸೇತುವೆಯಾಗಬೇಕು ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ಸಂಘಟನೆ ಗಟ್ಟಿಗೊಳಿಸೊಣ ಎಂದರು.
ತಾಲ್ಲೂಕು ಉಪಾಧ್ಯಕ್ಷ ನಾಗೇಶ್ ಕಮತಗಿ, ಕಾರ್ಮಿಕ ಘಟಕ ಅಧ್ಯಕ್ಷ ಹಸನ್ ಭಗವಾನ್, ತಾಲ್ಲೂಕು ಸಂಚಾಲಕ ಸಂತೋಷ ರಾಠೋಡ, ಸಂಘಟನಾ ಕಾರ್ಯದರ್ಶಿ ಬೀರು ಹಳ್ಳಿ , ಮಡಿವಾಳಯ್ಯ ಮಠಪತಿ, ದಿಲೀಪ ದೊಡ್ಡಮನಿ, ಅಜೀಮ್ ಪಟೇಲ್, ಪ್ರವೀಣಕುಮಾರ ಪವಾರ, ಸಲೀಂಸಾಬ್ ತುರುಕನಗಿರಿ, ಸಂತೋಷ ಕೊಟಗಿ, ಜಹಾಂಗೀರ ಮುಲ್ಲಾ ಸೇರಿದಂತೆ ರಕ್ಷಣಾ ವೇದಿಕೆಯ ವಿವಿಧ ಗ್ರಾಮ ಘಟಕಗಳ ಹಾಗೂ ತಾಲ್ಲೂಕು ಪದಾಧಿಕಾರಿಗಳು ಇದ್ದರು.

