ಸಿಂದಗಿಯಲ್ಲಿ ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಸಿಂದಗಿ: ನಾವೆಲ್ಲರೂ ಕಾರ್ಯದೆಡೆಗೆ ಹೆಚ್ಚಿನ ಗಮನ ಹರಿಸಿದಾಗ ಮಾತ್ರ ಬದಲಾವಣೆಯಾಗಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು, ನಾವು ಕೇವಲ ಭಾಷಣ ಮಾಡುವವರಾಗುತ್ತಿದ್ದೇವೆ. ಕೆಲಸಗಳಲ್ಲಿ ಕಾರ್ಯ ಪ್ರವೃತ್ತರಾಗುತ್ತಿಲ್ಲ. ಮಹಾನ್ ನಾಯಕರು ನೀಡಿದ ಸಂದೇಶಗಳು ನಾವು ಜಾರಿಗೆ ಬರುವಂತೆ ಮಾಡಬೇಕು. ಮತ್ತು ವಾಲ್ಮೀಕಿ
ಸಮಾಜದ ಬಹು ಬೇಡಿಕೆಯಾದ ಸಮುದಾಯ ಭವನ ನನ್ನ ಮುಂದಿನ ೨ ವರ್ಷದ ಅವಧಿಯಲ್ಲಿ ಮಾಡಿಸಿಕೊಡುವೆ. ಹಾಗೂ ವೃತ್ತಕ್ಕೆ ಕೆಲವು ಕಾನೂನು ಅಡತಡೆಗಳಿವೆ. ಅದನ್ನು ಕುಳಿತು ಮಾತನಾಡಿ ಬಗೆಹರಿಸುವ ಕೆಲಸ ಮಾಡೋಣ ಎಂದು ಭರವಸೆ ನೀಡಿದರು.
ಈ ವೇಳೆ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ವಾಯ್ ಸಿ ಮಯೂರ ಮಾತನಾಡಿ, ರಾಮ, ಲಕ್ಮಣ, ಸೀತಾ, ರಾವಣರನ್ನು ಜಗತ್ತಿಗೆ ಪರಿಚಯಿಸಿದ್ದು ಆದಿಕವಿ ಮಹರ್ಷಿ ವಾಲ್ಮೀಕಿ. ವಾಲ್ಮೀಕಿ ಎಂಬುದು ಕೇವಲ ಹೆಸರಲ್ಲ. ಅದು ಒಂದು ಶಕ್ತಿ ಎಂದು ಹೇಳಿದರು.
ಪುರಸಭೆ ಸದಸ್ಯ ಶರಣಗೌಡ ಪಾಟೀಲ ಮಾತನಾಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ, ಸಿ.ಪಿ.ಐ ಡಿ.ಹುಲಗಪ್ಪ, ಸಮಾಜ ಕಲ್ಯಾಣ ಅಧಿಕಾರಿ ಎನ್.ಎಸ್. ಭೂಸಗೊಂಡ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಅಶೋಕ ಅಲ್ಲಾಪುರ, ಈರಣ್ಣ ಕುರಿ, ಆರ್.ಎಸ್. ಬನ್ನೆಟ್ಟಿ, ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
*ಶ್ರೀ ಪದ್ಮರಾಜ ಮಹಿಳಾ ಕಾಲೇಜು*
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಪದವಿ ಪ್ರಾಚಾರ್ಯ ಎಮ್.ಎಸ್ ಹೈಯ್ಯಾಳಕರ, ಎಸ್.ಎಂ ಪೂಜಾರಿ, ಉಪನ್ಯಾಸಕರಾದ ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಮಹಾಂತೇಶ ನೂಲಾನವರ, ಎಸ್.ಸಿ ದುದ್ದಗಿ, ಎಲ್.ಎಮ್ ಮಾರ್ಸನಳ್ಳಿ, ಹೇಮಾ ಕಾಸರ, ಯು.ಸಿ ಪೂಜೇರಿ, ಪ್ರಭಾವತಿ ಮಾಲಿಪಾಟೀಲ, ಎಂ.ಕೆ ಬಿರಾದಾರ, ಶೃತಿ ಹೂಗಾರ, ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ ಸೇರಿದಂತೆ ಅನೇಕರಿದ್ದರು.
*ಬ್ಲಾಕ್ ಕಾಂಗ್ರೆಸ್ ಕಛೇರಿ*
ಪಟ್ಟಣದ ಎಪಿಎಂಸಿಯಲ್ಲಿರುವ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಪರಶುರಾಮ ಕಾಂಬಳೆ, ಜಯಶ್ರೀ ಹದನೂರ, ಶಾರದಾ ಬೆಟಗೇರಿ, ಮಹಾನಂದ ಬಮ್ಮಣ್ಣಿ, ಡಾ.ಸಂಗಮೇಶ ಪಾಟೀಲ, ಡಾ.ಶಿವಾನಂದ ಹೊಸಮನಿ, ಪುರಸಭೆ ಸದಸ್ಯ ಬಸವರಾಜ ಯರನಾಳ ಸೇರಿದಂತೆ ಕಾರ್ಯಕರ್ತರು ಇದ್ದರು.
*ತಾಲೂಕು ಸಾರ್ವಜನಿಕ ಆಸ್ಪತ್ರೆ* ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ರಾಜಶೇಖರ ನರಗೋದಿ, ಎಂ.ಪಿ ಸಾಗರ, ಡಾ. ಬಡಿಗೇರ ಹಾಗೂ ಡಾ.ರಾಠೋಡ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.
*ಪುರಸಭೆ ಸಿಂದಗಿ*
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ನಬಿರಸೂಲ ಉಸ್ತಾದ, ಸಿದ್ದು ಅಂಗಡಿ, ಶಿವು ಬಡಿಗೇರ, ಅಜರ್ ನಾಟೀಕಾರ್ ಸೇರಿದಂತೆ ಅನೇಕರು ಇದ್ದರು.