ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಸೇರಿದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸರ್ಕಾರದಿಂದ ಜಾರಿಯಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ವಿಫಲವಾಗಿವೆ. ೨೦೨೦ ರಿಂದ ೨೦೨೬ ರವರೆಗೆ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೧೫ ಕೋಟಿಗಳಿಗಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಸಿ,ಸಿರಸ್ತೆ, ಸಮುದಾಯ ಭವನ, ಶುದ್ಧ ಕುಡಿಯುವ ನೀರು, ಬೀದಿದೀಪ, ಚರಂಡಿಗಳು ಸರಿಯಾಗಿಲ್ಲ. ಇದು ದಲಿತರನ್ನು ಸೌಕರ್ಯಗಳಿಂದ ವಂಚಿತರಾಗಿಸುವದಕ್ಕೆ ನಿದರ್ಶನಗಳಾಗಿವೆ ಎಂದರು.
ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ ದಿಂಡವಾರ, ಶರಣು ಶಿಂಧೆ, ಲಕ್ಕಪ್ಪ ಬಡಿಗೇರ, ಮಲ್ಕು ಬಾಗೇವಾಡಿ, ರೈತಸಂಘದ ಸಂಪತ್ ಜಮಾದಾರ ಮಾತನಾಡಿದರು. ನಂತರ ಬೇಡಿಕೆಗಳನ್ನು ಒಳಗೊಂಡ ಹತ್ತು ಪುಟಗಳ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿದರು.
ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಸಂಘಟನಾ ಸಂಚಾಲಕ ಬಸವರಾಜ ಇಂಗಳಗಿ, ರಾಷ್ಟ್ರೀಯ ರೈತಸಂಘದ ರೇಣುಕಾ ಪಾಟೀಲ, ಶಾಂತಪ್ಪಗೌಡ ದೇವರಮನಿ, ಶ್ರೀಕಾಂತ ಬಜಂತ್ರಿ, ಯಮನಪ್ಪ ಭೂತಾಳಿ, ಪರಶುರಾಮ ಬಡಿಗೇರ, ಪ್ರಕಾಶ ಶಾಂತಗಿರಿ, ರಾಘವೇಂದ್ರ ಪಡಗಾನೂರ, ಮಾಂತೇಶ ಚಲವಾದಿ ಇದ್ದರು.

