ಉದಯರಶ್ಮಿ ದಿನಪತ್ರಿಕೆ
ಇಂಡಿ: ಒಳ ಮಿಸಲಾತಿ ವಿರೋಧಿಸಿ ಇಂದು ಬಂಜಾರಾ ಸಮುದಾಯದವರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಆಡಳಿತಸೌಧ ತಲುಪಿತು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ ೨೦೧೮ ರಲ್ಲಿ ಬಿಜೆಪಿ ಸರಕಾರ ಒಳ ಮಿಸಲಾತಿ ತಂದಿದ್ದರು. ಆಗ ಬಂಜಾರಾ ಸಮುದಾಯ ಮತ್ತು ಸಮುದಾಯದ ಶಾಸಕರು ವಿರೋಧಿಸಿದ್ದರು.ಆದರೂ ಅವರು ಜಾರಿಗೆ ತಂದರು. ಮುಂದೆ ೨೦೧೮ ರ ಚುನಾವಣೆಯಲ್ಲಿ ಹೇಗೆ ಬಿಜೆಪಿಗೆ ಪಾಠ ಕಲಿಸಿದೆಯೋ ಹಾಗೆಯೇ ೨೦೨೮ ರ ಚುನಾವಣೆಯಲ್ಲಿ ವಿರೋಧ ಮರುಕಳಿಸುವದು ಎಂದರು.
ರಾಜ್ಯದಲ್ಲಿ ಅತ್ಯಂತ ಹೆಚ್ಚು ಬಂಜಾರಾ ಸಮುದಾಯ ಜನಸಂಖ್ಯೆ ಹೊಂದಿದ ವಿಜಯಪುರ ಜಿಲ್ಲೆಯಿಂದಲೇ ನಾವೆಲ್ಲರೂ ಪಕ್ಷಾತೀತವಾಗಿ ಸರಕಾರಕ್ಕೆ ಎಚ್ಚರಿಕೆ ಘಂಟೆಯನ್ನು ತಟ್ಟುತ್ತೇವೆ.
ಈ ಸರಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಅರ್ಥಿಕವಾಗಿ ಶೈಕ್ಷಣಿಕವಾಗಿ ಉದ್ಯೋಗಿಕವಾಗಿ ಸರಕಾರದ ಇತರೆ ಮೂಲಭೂತ ಸೌಕರ್ಯಗಳು ಪಡೆದುಕೊಳ್ಳಲು ಉರುಳಾಗಿದೆ ಎಂದರು.
ಮಹೇರಿ ರಾಠೋಡ ಪ್ರಕಾಶ ಮಹಾರಾಜ,ಮಹಿಂದರ ನಾಯಕ, ವಿಶ್ವನಾಥ ಚವ್ಹಾಣ, ಜಿ.ಪಂ ಮಾಜಿ ಸದಸ್ಯ ರಾಮು ರಾಠೋಡ ಬಂಜಾರಾ ಸೇವಾ ಸಂಘದ ಇಂಡಿಯ ಅಧ್ಯಕ್ಷ ಸಂಜೀವ ಚವ್ಹಾಣ, ವಿಜಯ ರಾಠೋಡ, ಡಾ. ರಮೇಶ ರಾಠೋಡ, ಸಂಜಯ ಜಾಧವ ಲಿಂಬಾಜಿ ರಾಠೋಡ ಬಾಬು ಪವಾರ ನಾರಾಯಣ ಚವ್ಹಾಣ ಕಿರಣ ರಾಠೋಡ ಮಹಾದೇವ ರಾಠೋಡ ಸೋಮು ರಾಠೋಡ ಮತ್ತಿತರಿದ್ದರು.
ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.

