ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿನಂತೆ ತಾಯಿಯ ಮಹಿಮೆ ಅಪಾರವಾಗಿದ್ದು, ಹೆತ್ತ ತಾಯಿ ತನಗೆ ಒದಗಿದ ಎಲ್ಲ ನೋವು ನಲಿವುಗಳನ್ನು ಸಮಚಿತ್ತದಲ್ಲಿ ಸ್ವಿಕರಿಸುವ ವಾತ್ಸಲ್ಯ ಮೂರ್ತಿಯಾಗಿದ್ದು, ನೋವನ್ನು ನುಂಗಿ ನಮಗೆಲ್ಲ ಸದಾ ಪ್ರೀತಿಯನ್ನೇ ಧಾರೆಯೆರೆವ ವಾತ್ಸಲ್ಯ ಮೂರ್ತಿಯಾದ ತಾಯಿಯು ಈ ಭೂಮಿತಾಯಿಯಷ್ಟೇ ತೂಕದವಳಾಗಿದ್ದು, ಅವರನ್ನು ಪ್ರತಿನಿತ್ಯವೂ ಸ್ಮರಿಸುವಂತಹ ಮನೋಭಾವದ ಜೊತೆಗೆ ಎಲ್ಲರೂ ತಾಯಿಯ ಪ್ರೀತಿ, ವಾತ್ಸಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಯೋಗ ಟೀಮ್ ಮಹಾಗುರುಗಳಾದ ಡಿ.ಎನ್.ಚಿಕ್ಕಮಠ ಹೇಳಿದರು.
ಕಲಕೇರಿ ಗ್ರಾಮದ ಮಾತೃ ಸೇವಾ ಸಂಸ್ಥೆಯ ವತಿಯಿಂದ ಮಾತೋಶ್ರೀ ದಿ. ಗಂಗಮ್ಮ ಅಡಕಿ ಅವರ ೧೩ನೇ ವರ್ಷದ ಪುಣ್ಯಾರಾಧನೆಯ ನಿಮಿತ್ಯ ಸ್ಥಳಿಯ ವಿದ್ಯುತ್ ವಿತರಣಾ ಕೇಂದ್ರ (ಕೆಇಬಿ)ದಲ್ಲಿ ಸಸಿ ನೆಟ್ಟು ನೀರುಣಿಸಿ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾತೃ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಗ್ರಾಪಂ ಸದಸ್ಯ ಸುಧಾಕರ ಅಡಕಿ ಅವರು ಮಾತನಾಡಿ, ನನ್ನ ತಾಯಿಯ ಸವಿನೆನಪಿಗಾಗಿ ಕಳೆದ ೧೨ ವರ್ಷಗಳಿಂದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ಸುಮಾರು ೫೦೦-೮೦೦ ವಿವಿಧ ಹಣ್ಣಿನ ಹಾಗೂ ಹೂವಿನ ಸಸಿಗಳನ್ನು ನೀಡುತ್ತಾ ಬಂದಿರುವೆ. ತಾಯಿಯ ಸ್ಮರಣಾರ್ಥ ಪರಿಸರದ ಬೆಳವಣಿಗೆಗಾಗಿ ಸಸಿ ವಿತರಿಸುವ ನನ್ನ ಅಳಿಲು ಸೇವೆ ನಿರಂತರವಾಗಿರಲಿದ್ದು, ಈ ಭಾಗದ ಜನರು ಇದರ ಸದುಪಯೋಗ ಪಡೆಯಲಿ ಎಂದು ಹೇಳಿದರು.
ಈ ವೇಳೆ ಹಿರಿಯರಾದ ಎಂ.ಎಂ.ಸಾಲೋಡಗಿ, ಜವಾಹರ ಕುಲಕರ್ಣಿ, ಬಸವರಾಜ ಜಂಬಗಿ, ಗೂಳಪ್ಪ ವಡವಡಗಿ, ಶ್ರೀಶೈಲ ನಾಯ್ಕೋಡಿ, ಎಚ್.ಜಿ.ಕಳ್ಳೀಮನಿ, ಈರಘಂಟೆಪ್ಪ ಮೋಪಗಾರ, ಕೆ.ಆರ್.ಪಾಟೀಲ, ಮಡು ಜಂಬಗಿ, ಮಲ್ಲಿಕಾರ್ಜುನ ಬಳ್ಳಾರಿ, ಮನೋಜ ಸಜ್ಜನ, ಶಂಕರಗೌಡ ಪಾಟೀಲ, ಪುನೀತ ಸಜ್ಜನ, ರಾಜಶೇಖರ ಗುಮಶೆಟ್ಟಿ, ಕುಮಾರಗೌರವ ಅಡಕಿ, ಸುಪ್ರೀತ್ ಅಡಕಿ, ಬಲವಂತ ಮೋಪಗಾರ ಸೇರಿದಂತೆ ಇತರರು ಇದ್ದರು.

