ಉದಯರಶ್ಮಿ ದಿನಪತ್ರಿಕೆ
ಭಾರತದ ಆತ್ಮ ಅದು ‘ಆಧ್ಯಾತ್ಮ’. ಮಾನವನ ಅಂತಿಮ ಗುರಿ ಸಾಧನೆಯೇ ಪರಮ ಸಂತೋಷ, ನೆಮ್ಮದಿ ಸೌಖ್ಯ ಕಾಣುವುದು.
ಬದುಕಿನುದ್ದಕ್ಕೂ ಏನೆಲ್ಲವನ್ನು ಸಂಪಾದಿಸಿದರೂ ಕೂಡ ತನ್ನನ್ನು ತಾನು ಮರೆತು ಅಲ್ಪಸುಖದ ಜೀವಿಯಾಗಿರುತ್ತಾನೆ. ಆಧ್ಯಾತ್ಮ ಅದು ಎಲ್ಲವನ್ನು ತೊರೆ ಎಂದಲ್ಲ, ಎಲ್ಲರೊಳಗೂ ಎಲ್ಲದರೊಳಗೂ ಇದ್ದು ಇಲ್ಲದಂತೆ “ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ” ಯಂತೆ ತನ್ನನ್ನು ತಾನು ಅರಿಯುವುದರ ಮೂಲಕ ಸ್ವಯವನರಿತು ಆದಮ್ಯ ಚೇತನನಾಗಿ ಬಾಳುವಂತಹುದು.
ಪವಿತ್ರವಾದ ಶ್ರಾವಣ ಮಾಸದಲ್ಲಿ ಶ್ರವಣ ಮೇನನ ನಿಧಿದ್ಯಾಸದಿಂದ ಸತ್ಸಂಗತ್ತೆ ನಿಸಂಗತ್ವಂ ನಿಸಂಗತ್ವೇ ನಿರ್ಮೂಹಿತ್ವಂ ನಿರ್ಮೂಹಿತ್ವೇ ನಿರ್ಜಲತತ್ವಂ ನಿಶ್ಚಲ ನಿರಾಕಾರ ನಿರಂಜನ ನಿರಾಭಾರಿ ನಿರ್ಭಯನಾದ ಭಗವಂತನ ಸಾನಿಧ್ಯಕ್ಕೆ ಸತ್ಸಂಗ ಬಹಳ ಮುಖ್ಯ. ಸಾರ ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಶರಣ ವಾಣಿಯಂತೆ ಸತ್+ ಜನರ = ಸಜ್ಜನರ ಕೂಟ ಮನಸ್ಸಿನ ನೆಮ್ಮದಿಗೆ ರಹದಾರಿಯಾಗಿದೆ. ಅದಕ್ಕಂತೆಯೇ ಶ್ರವಣ ಶ್ರಾವಣ ಕೇಳುವಿಕೆ ನೆರೆಕೆಳು ಕೇಳುದದನರಿ ಅರಿತೊಮ್ಮೆ ಆಚರಿಸು ಎಂದು ಪೂರ್ವಜರು ಶ್ರಾವಣದಲ್ಲಿ ಸಜ್ಜನರ ಸಂಘದಲ್ಲಿದ್ದು ಪುರಾಣ ಪ್ರವಚನಗಳನ್ನು ಕೇಳುತ್ತಾ, ಕೇಳುತ್ತಾ ಬದುಕಿನ ಸಾರ್ಥಕತೆಯನ್ನು ಕಂಡುಂಡಿದ್ದು ಸತ್ಯ.
” ಲೇಸ ಕೇಳಲಿ ಕಿವಿಯು ನಾಲಿಗೆ ಲೇಸ ನುಡಿದು ಬರಲಿ ಲೆಸೆ ಕೈಗಳಿಂದಾಗಲಿ ಲೇಸನುಸಿರಿ ಲೇಸನ್ನುಟ್ಟು ಲೆಸಿನಿಂದಲೇ ಬಾಳು ಬೆಳಗುತಿರಲಿ”
ಇದೇ ಶ್ರಾವಣ ಮಾಸದ ಸಾರ್ಥಕ್ಯದ ಕ್ಷಣಗಳು.
– ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು
ವೀರಕ್ತಮಠ, ಯಡ್ರಾಮಿ
ಕಲಬುರ್ಗಿ ಜಿಲ್ಲೆ

