ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಸಜ್ಜಲಗುಡ್ಡ ಶರಣಮ್ಮನವರು ಹಾಗೂ ಶ್ರೀ ನಿಜಗುಣ ಶಿವಯೋಗಿಗಳ ಇತಿಹಾಸ ಮತ್ತು ತತ್ವಚಿಂತನೆ ಎಲ್ಲರ ಬಧುಕಿಗೆ ಆದರ್ಶಪ್ರಾಯವಾಗಿವೆ ಸಜ್ಜಲಗುಡ್ಡ ಶರಣಮ್ಮನವರ ಬದುಕು ಶರಣ ಪರಂಪರೆಯ ಮೌಲ್ಯಗಳು, ಭಕ್ತಿ, ಧರ್ಮನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಮಾದರಿಯಾಗಿದೆ ಎಂದು ಎಚ್.ಎಸ್.ಪಾಟೀಲ ಕಾಲೇಜ್ ಆಂಗ್ಲಭಾಷಾ ಉಪನ್ಯಾಸಕ ಪರಶುರಾಮ ಚೌಡಕೇರ್ ಅವರು ಹೇಳಿದರು.
ಪಟ್ಟಣದ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಲಾದ ಸತ್ಸಂಗ ಅನುಭಾವ ಚಿಂತನೆ ಕಾರ್ಯಕ್ರಮ ಮಾತನಾಡಿದ ಅವರು, ನಿಜಗುಣ ಶಿವಯೋಗಿಗಳ ವಿಚಾರಧಾರೆ ಮುಂದಿನ ಸಂತ-ಶರಣರ ಆಧ್ಯಾತ್ಮಿಕ ಚಿಂತನೆಗಳ ಮೇಲೂ ಪ್ರಭಾವ ಬೀರಿದೆ. ಸಿದ್ದಾರೂಢ ಸ್ವಾಮಿಗಳ ಮೂಲಕ ನಿಜಗುಣ ಶಿವಯೋಗಿಗಳ ಚಿಂತನೆಗಳು ಮತ್ತಷ್ಟು ಜನಮಾನಸಕ್ಕೆ ತಲುಪಿ, ಅವರ ತತ್ವದ ವ್ಯಾಪ್ತಿ ಮುಗಿಲೆತ್ತರಕ್ಕೆ ಬೆಳೆದಿದೆ ನಿಜಗುಣ ಶಿವಯೋಗಿಗಳು ಬರೆದಿರುವ ಪ್ರವಚನ ಹಾಗೂ ತತ್ವಗ್ರಂಥಗಳಲ್ಲಿನ ವಿಚಾರಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಅಗತ್ಯವಿದೆ ಅವರಂತೆ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಪ್ರವಚನವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಅವರ ಜೀವನಾದರ್ಶ, ಶರಣ ಸಂಸ್ಕೃತಿ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳನ್ನು ತಿಳಿದುಕೊಳ್ಳುವ ಅವಕಾಶವಾಗಿದೆ ಎಂದರು.
ನಾಲತವಾಡದ ಗ್ರಾಮ ಲೆಕ್ಕಾಧಿಕಾರಿ ಸಚಿನಗೌಡ ವರು ಮಾತನಾಡಿ, ಸಜ್ಜಲಗುಡ್ಡ ಶರಣಮ್ಮನವರ ಜೀವನದ ಕುರಿತು ಪುರಾಣ ಪ್ರವಚನವನ್ನು ಪರಶುರಾಮ್ ಚೌಡಕೆರ್ ಸರ್ ಅವರು ನಡೆಸಿಕೊಡುತ್ತಿದ್ದಾರೆ. ಪ್ರವಚನದ ಸಂದರ್ಭದಲ್ಲಿ ಶರಣಮ್ಮನವರ ಜೀವನದ ಪ್ರಮುಖ ಘಟನೆಗಳು, ಅವರ ಭಕ್ತಿ-ಶ್ರದ್ಧೆ, ಶರಣ ಪರಂಪರೆಯೊಂದಿಗಿನ ನಂಟು ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಭಕ್ತರಿಗೆ ತಿಳಿಸಿಕೊಡಲಾಗುತ್ತಿದೆ. ಎಂದು ಶ್ರೀ ನಿಜಗುಣ ಶಿವಯೋಗಿಗಳ ಹಾಗೂ ಸಜ್ಜಲಗುಡ್ಡ ಶರಣಮ್ಮನವರ ಕುರಿತು ಕೆಲವು ವಿಚಾರಧಾರೆಯನ್ನು ಹಂಚಿಕೊಂಡರು.
ಶಿಕ್ಷಕಿ ಶ್ರೀಮತಿ ಸುಮಂಗಲಾ ಕೊಳೂರ ಮಾತನಾಡಿದರು.
ಶರಣೆ ಶಾಂತಮ್ಮ ತಾಯಿ ಕೊಳೂರ ಸಾನಿದ್ಯ ವಹಿಸಿದ್ದರು.
ಸಿಎಂ ಹಿರೇಮಠ ಹಾಗೂ ಎಸ್.ಎಂ. ಬೆನಾಳಮಠ ಅವರು ನೇತೃತ್ವ ವಹಿಸಿದ್ದರು.
ಈ ಸಮಯದಲ್ಲಿ ಪತ್ರಕರ್ತರಾದ ಅಂಬಾಜಿ ಘೋರ್ಪಡೆ, ಬಿ.ಎಸ್. ದ್ಯಾಪುರ, ಬಸಣ್ಣನವರ್ ಸರ್, ಶಶಿಧರ ಕೆಸರಭಾವಿ, ಓತಗಿರಿ, ಇಜೇರಿ, ಶ್ರೀಮತಿ ಸುನಂದಾ ನೀರಲಗಿ, ದ್ರಾಕ್ಷಾಯಿಣಿ ಹಿಪ್ಪರಗಿ, ಶಿಲ್ಪಾ ಪಾಟೀಲ್, ಶಾರದಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

