ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಿನ ಕಲೆ, ಸಾಹಿತ್ಯ, ಸಂಗೀತ, ಜಾನಪದ ಹಾಗೂ ನೃತ್ಯ ಕಲಾಪ್ರಕಾರಗಳನ್ನು ಪೋಷಿಸುವ ನೋಂದಾಯಿತ ಸಂಘ-ಸಂಸ್ಥೆಗಳು ಮತ್ತು ಕಲಾವಿದರಿಗೆ ಸರ್ಕಾರ ನೀಡುವ ವಿವಿಧ ಸಹಾಯಧನಗಳ ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.೪ ರವರೆಗೆ ವಿಸ್ತರಿಸಲಾಗಿದೆ.
೨೦೨೬-೨೭ನೇ ಸಾಲಿನ ಸಾಮಾನ್ಯ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಸೆ.೪ ರವರೆಗೆ ಅರ್ಜಿ ಸಲ್ಲಿಸುವ ಕಾಲಾವಕಾಶ ಒದಗಿಸಲಾಗಿದೆ.
ನೋಂದಾಯಿತ ಕಲಾ ಸಂಘ-ಸಂಸ್ಥೆಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳ ಧನಸಹಾಯ ಕಲಾವಿದರಿಗೆ ವಾದ್ಯ ಪರಿಕರ ಹಾಗೂ ವೇಷಭೂಷಣ ಖರೀದಿಗೆ ನೆರವು ಚಿತ್ರಕಲೆ ಮತ್ತು ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಕೇವಲ ಸೇವಾಸಿಂಧು ಪೋರ್ಟಲ್ ಮೂಲಕವೇ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ನೇರವಾಗಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಸೆ. ೪ ರ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೂರವಾಣಿ ಸಂಖ್ಯೆ:೦೮೦-೨೪೪೧೦೫೭೪, ೦೮೦-೨೨೨೧೩೫೩೦, ೦೮೦-೨೨೨೪೧೩೨೫, ೯೯೮೬೮೩೭೦೩೭ವಿಜಯಪುರ ಜಿಲ್ಲಾ ಕಚೇರಿ: ೦೮೩೫೨-೨೫೧೨೬೧ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ.
