ಮುದ್ದೇಬಿಹಾಳ: ಅ.೨೯ ರಂದು ಬೆಳಿಗ್ಗೆ ೧೦ಕ್ಕೆ ತಾಲೂಕಿನ ಕುಂಟೋಜಿಯ ಬಸವೇಶ್ವರ ಸಭಾಭವನದಲ್ಲಿ ನನ್ನ ಪಟ್ಟಾಧಿಕಾರದ ಕುರಿತು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಪೂಜ್ಯರು, ಗಣ್ಯ ಮಾನ್ಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ರಾಜಕಾರಣಿಗಳು, ಶಿಷ್ಯ ಬಳಗದವರು ಪಾಲ್ಗೊಂಡು ಬೆಂಬಲಿಸುವಂತೆ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ವಿನಂತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾನಗಲ್ ಶ್ರೀ ಗುರು ಕುಮಾರೇಶ್ವರ ಕೃಪೆಯಿಂದ, ನಾಡಿನ ಪಂಚಾಚಾರ್ಯ ಜಗದ್ಗುರುಗಳ ಆಶೀರ್ವಾದದೊಂದಿಗೆ, ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು, ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಪೂಜ್ಯರ ಗೌರವ ಅಧ್ಯಕ್ಷತೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ನೇತೃತ್ವದಲ್ಲಿ ಕುಂಟೋಜಿ ಗ್ರಾಮದ ದೈವದವರ ನೇತೃತ್ವದಲ್ಲಿ ಈ ಪೂರ್ವಭಾವಿ ಸಭೆಯನ್ನು ಏರ್ಪಡಿಸಿದ್ದು ಎಲ್ಲ ಮಹನೀಯರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ವಿನಂತಿಸಿದ್ದಾರೆ.
Related Posts
Add A Comment