ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತಿಯ ೭ನೇ ವಾರ್ಡಿನ ಸದಸ್ಯ ವಿಜಯಮಹಾಂತೇಶ ಕಲ್ಲಪ್ಪ ಗಿಡ್ಡಪ್ಪಗೋಳ ಇವರನ್ನು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಕೊಲ್ಹಾರ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಯುವ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ ಆದೇಶ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಪ್ರತಿಯೊಂದು ಪ್ರದೇಶದಲ್ಲಿ ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಪದಾದಿಕಾರಿಗಳು ಶ್ರಮಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಎಮ್.ಸಿ.ಮುಲ್ಲಾ , ರಾಜ್ಯ ಸಂಚಾಲಕ ಸಂತೋಷಗೌಡ ಪಾಟೀಲ, ಅವರ ಮನವಿ ಮೇರೆಗೆ ರಾಜ್ಯಧ್ಯಕ್ಷರಾದ ನಾರಾಯಣಗೌಡ ಅವರು ವಿಜಯಮಹಾಂತೇಶ ಅವರನ್ನು ನೇಮಕ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment