ಮುದ್ದೇಬಿಹಾಳ: ಅ.೨೯ ರಂದು ಸಂಜೆ ೫:೪೫ ಕ್ಕೆ ಪಟ್ಟಣದ ವಿಬಿಸಿ ಹೈಸ್ಕೂಲ್ ನ ಸಿದ್ದೇಶ್ವರ ವೇದಿಕೆಯಲ್ಲಿ ಎಳೆಯರು ನಾವು ಗೆಳೆಯರು ಸಂಘದಿಂದ ಗುರು-ಶಿಷ್ಯರ ಸಮ್ಮಿಲನ, ಗುರುವಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹಿರಿಯರು, ವರ್ತಕರು, ರಾಜಕೀಯ ಮುಖಂಡರು, ನ್ಯಾಯವಾದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಮುಖರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿಕೊಂಡರು.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮುಖರಾದ ಕಾಮರಾಜ ಬಿರಾದಾರ, ಟಿ.ಡಿ.ಲಮಾಣಿ, ಪ್ರಕಾಶ ಸರಾಫ್, ಆಸೀಫ್ ಅವಟಿ, ಹಣಮಂತ ನಲವಡೆ, ಜಗದೀಶ ಲಕ್ಷಟ್ರ ಸನ್ ೧೯೯೩ ರಲ್ಲಿ ಪಟ್ಟಣದ ಪ್ರಮುಖ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಾಂಗ ಮಾಡಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡಿಕೊಂಡು ದೊಡ್ಡ ಪ್ರಮಾಣದಲ್ಲಿ ಎಲ್ಲ ಶಿಕ್ಷಕರುಗಳಿಗೆ ಗುರುವಂದನೆಯನ್ನು ಸಲ್ಲಿಸಬೇಕು ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಅಂದು ಮುಂಜಾನೆ ೮:೩೦ ಕ್ಕೆ ಪಟ್ಟಣದ ಹುಡ್ಕೋದಲ್ಲಿರುವ ಟಾಪ್ ಇನ್ ಟೌನ್ ಹಾಲ್ ನಲ್ಲಿ ಎಲ್ಲ ಸ್ನೇಹಿತರೂ ಸೇರಿ ಗುರುಗಳೆಲ್ಲರ ಆಶೀರ್ವಾದ ಪಡೆದು ಅವರ ಜೊತೆ ಉಪಹಾರ ಸೇವಿಸಿ ನಂತರ ಕುಂಟೋಜಿಯ ಬಸವೇಶ್ವರ ದೇವಸ್ಥಾನದಲ್ಲಿ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಬಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಿ ನಂತರ ಮದ್ಯಾಹ್ನದ ಉಪಹಾರ ಸೇವಿಸಿದ ಬಳಿಕ ಈ ಎಲ್ಲ ಸ್ನೇಹಿತರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದವರಿಗೆ ಪುರಸ್ಕರಿಸಿ ನಂತರ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಂತರ ಸಂಜೆ ವ್ಹಿಬಿಸಿ ಹೂಸ್ಕೂಲ್ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳಿಂದ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲ ಮಹನೀಯರು ಆಗಮಿಸಿ ಶೋಭೆ ತರಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಪ್ರಭು ಕರಡಿ, ಅಪ್ಪು ಸಂಗಮ, ರಮೇಶ ಕೆಂಧೂಳಿ, ಮುತ್ತಪ್ಪ ಬಾವಲತ್ತಿ, ಸುರೆಶ ಬಿರಾದಾರ, ನವೀನ ಮೋಟಗಿ, ಬಸವರಾಜ ಅಂಗಡಗೇರಿ, ಅಮೀನಸಾ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment