ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ೧೮,೯೯,೨೪೮ ಮತದಾರರು
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ೯,೬೮,೧೩೩ ಪುರುಷ ಮತದಾರರು, ೯,೩೦,೮೯೮ ಮಹಿಳಾ ಮತದಾರರು ಹಾಗೂ ೨೧೭ ಇತರೆ ಮತದಾರರು ಸೇರಿದಂತೆ ಒಟ್ಟು ೧೮,೯೯,೨೪೮ ಮತದಾರರಿದ್ದು, ದಿನಾಂಕ : ೦೫-೦೧-೨೦೨೪ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ : ೨೫-೦೯-೨೦೨೩ರನ್ವಯ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ವೇಳಾಪಟ್ಟಿಯಂತೆ ದಿನಾಂಕ : ೨೭-೧೦-೨೦೨೩ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದು, ದಿನಾಂಕ : ೨೭-೧೦-೨೦೨೩ ರಿಂದ ೦೯-೧೨-೨೦೨೩ರವರೆಗೆ ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ, ನಂತರ ವಿಶೇಷ ಕ್ಯಾಂಪೇನ್‌ಗಳ ದಿನಾಂಕ ಹಾಗೂ ದಿನಾಂಕ : ೨೬-೧೨-೨೦೨೩ ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ, ಮತ್ತು ದಿನಾಂಕ : ೦೫-೦೧-೨೦೨೪ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು ೧೮,೯೯,೨೪೮ ಮತದಾರರು : ವಿಧಾನಸಭಾ ವಿವರವಾರು ಮತದಾರರ ವಿವರದಂತೆ ೨೬-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೧೧೦೨೫೬ ಗಂಡು, ೧೦೭೫೬೧ ಹೆಣ್ಣು ಹಾಗೂ ೨೦ ಇತರೆ ಮತದಾರರು ಸೇರಿದಂತೆ ಒಟ್ಟು ೨೧೭೮೩೭ ಮತದಾರರಿದ್ದಾರೆ. ೨೭-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೧೧೨೬೬೬ ಗಂಡು, ೧೦೬೮೪೦ ಹೆಣ್ಣು ಹಾಗೂ ೨೦ ಇತರೆ ಸೇರಿದಂತೆ ಒಟ್ಟು ೨೧೯೫೨೬ ಮತದಾರರಿದ್ದಾರೆ. ೨೮-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೧೦೭೬೮೨ ಗಂಡು, ೧೦೩೯೩೨ ಹೆಣ್ಣು ಹಾಗೂ ೧೪ ಇತರೆ ಸೇರಿದಂತೆ ಒಟ್ಟು ೨೧೧೬೨೮ ಮತದಾರರಿದ್ದಾರೆ. ೨೯-ಬಬಲೇಶ್ವರ ಮತಕ್ಷೇತ್ರದಲ್ಲಿ ೧೧೧೦೭೫ ಗಂಡು, ೧೦೬೯೪೭ ಹೆಣ್ಣು ಹಾಗೂ ೫ ಇತರೆ ಸೇರಿದಂತೆ ೨೧೮೦೨೭ ಮತದಾರರಿದ್ದಾರೆ.
೩೦-ಬಿಜಾಪುರ ನಗರ ಮತಕ್ಷೇತ್ರದಲ್ಲಿ ೧೪೦೨೩೧ ಗಂಡು, ೧೪೨೫೨೩ ಹೆಣ್ಣು ಹಾಗೂ ೯೨ ಇತರೆ ಮತದಾರರು ಸೇರಿದಂತೆ ಒಟ್ಟು ೨೮೨೮೪೬ ಮತದಾರರಿದ್ದಾರೆ. ೩೧-ನಾಗಠಾಣ ಮತಕ್ಷೇತ್ರದಲ್ಲಿ ೧೩೮೩೪೦ ಗಂಡು, ೧೩೦೮೬೪ ಹೆಣ್ಣು ಹಾಗೂ ೨೦ ಇತರೆ ಸೇರಿದಂತೆ ಒಟ್ಟು ೨೬೯೨೨೪ ಮತದಾರರಿದ್ದಾರೆ. ೩೨-ಇಂಡಿ ಮತಕ್ಷೇತ್ರದಲ್ಲಿ ೧೨೫೭೫೮ ಗಂಡು, ೧೧೭೩೫೬ ಹೆಣ್ಣು ಹಾಗೂ ೧೮ ಇತರೆ ಸೇರಿದಂತೆ ಒಟ್ಟು ೨೪೩೧೩೨ ಮತದಾರರಿದ್ದಾರೆ. ೩೩-ಸಿಂದಗಿ ಮತಕ್ಷೇತ್ರದಲ್ಲಿ ೧೨೨೧೨೫ ಗಂಡು, ೧೧೪೮೭೫ ಹೆಣ್ಣು ಹಾಗೂ ೨೮ ಇತರೆ ಸೇರಿದಂತೆ ಒಟ್ಟು ೨೩೭೦೨೮ ಮತದಾರರಿದ್ದು, ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳಲ್ಲಿ ೯೬೮೧೩೩ ಗಂಡು, ೯೩೦೮೯೮ ಹೆಣ್ಣು ಹಾಗೂ ೨೧೭ ಸೇರಿದಂತೆ ಒಟ್ಟು ೧೮,೯೯,೨೪೮ ಮತದಾರರಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಮತಗಟ್ಟೆಗಳ ವಿವರ : ಈ ಮೊದಲಿದ್ದ ೨೦೭೨ ಮತಗಟ್ಟೆಗಳಲ್ಲಿ ಒಂದೇ ಆವರಣದ ಒಂದೇ ಕಟ್ಟಡದಲ್ಲಿರುವ ಮತಗಟ್ಟೆಯ ಮತದಾರರನ್ನು ಪಕ್ಕದಲ್ಲಿರುವ ಮತಗಟ್ಟೆಗೆ ವಿಲೀನಗೊಳಿಸಲಾಗಿದೆ. ಜಿಲ್ಲೆಯ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದದಲ್ಲಿ ೦೨ ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ೦೩ ಸೇರಿದಂತೆ ಒಟ್ಟು ೫ ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. ಹಾಗೂ ೧೫೦೦ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳಲ್ಲಿ ಹೊಸದಾಗಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೦೪, ಬಿಜಾಪುರ ನಗರ ಮತಕ್ಷೇತ್ರದಲ್ಲಿ ೧೩ ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ ೦೧ ಸೇರಿದಂತೆ ಒಟ್ಟು ೧೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ೨೦೮೫ ಮತಗಟ್ಟೆಗಳು ಅಸ್ವಿತ್ವದಲ್ಲಿವೆ.
ವಿಧಾನಸಭಾ ಕ್ಷೇತ್ರವಾರು ವಿವರದಂತೆ ೨೬-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಮೊದಲು ೨೪೧ ಮತಗಟ್ಟೆಗಳಿದ್ದು, ೧೫೦೦ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳಲ್ಲಿ ಹೊಸದಾಗಿ ೦೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೨೪೫ ಮತಗಟ್ಟೆಗಳಿವೆ.
ಅದರಂತೆ ೨೭- ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೫೨, ೨೮-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಮೊದಲು ೨೩೨ ಮತಗಟ್ಟೆಗಳಿದ್ದು, ೨ ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, ಒಟ್ಟು ೨೩೦ ಮತಗಟ್ಟೆಗಳು ಅಸ್ವಿತ್ವದಲ್ಲಿವೆ. ೨೯-ಬಬಲೇಶ್ವರ ಮತಕ್ಷೇತ್ರದಲ್ಲಿ ೨೪೩, ೩೦-ಬಿಜಾಪುರ ನಗರ ಮತಕ್ಷೇತ್ರದಲ್ಲಿ ಈ ಮೊದಲು ೨೬೯ ಮತಗಟ್ಟೆಗಳಿದ್ದು, ೧೩ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೨೮೨ ಮತಗಟ್ಟೆಗಳಿವೆ.
೩೧-ನಾಗಠಾಣ ಮತಕ್ಷೇತ್ರದಲ್ಲಿ ಈ ಮೊದಲು ೨೯೬ ಮತಗಟ್ಟೆಗಳಿದ್ದು, ಹೊಸದಾಗಿ ೧ ಮತಗಟ್ಟೆ ಸ್ಥಾಪಿಸಿದ್ದು, ಒಟ್ಟು ೨೯೭ ಮತಗಟ್ಟೆಗಳಿವೆ. ೩೨-ಇಂಡಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳು, ೩೩-ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು ೨೭೧ ಮತಗಟ್ಟೆಗಳಿದ್ದು, ೩ ಮತಗಟೆಗಳನ್ನು ವಿಲೀನಗೊಳಿಸಲಾಗಿದೆ. ಒಟ್ಟು ೨೬೮ ಮತಗಟ್ಟೆಗಳಿವೆ. ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಮೊದಲು ೨೦೭೨ ಮತಗಟ್ಟೆಗಳಿದ್ದು, ೦೫ ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, ೧೮ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಜಿಲ್ಲೆಯಾದ್ಯಂತೆ ೨೦೮೫ ಮತಗಟ್ಟೆಗಳಿವೆ ಅಸ್ವಿತ್ವದಲ್ಲಿವೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ-ತೆಗೆದುಹಾಕಲು ಅವಕಾಶ : ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ವೋಟರ್ ಹೆಲ್ಪಲೈನ್ ಮೊಬೈಲ್ ಆಪ್ ಅಥವಾ ಓಗಿSP ಪೋರ್ಟಲ್ ಅಥವಾ www.karnataka.gov.in ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ. ಖಚಿತಪಡಿಸಿಕೊಂಡ ನಂತರ ಯಾವುದಾದರೂ ತಿದ್ದುಪಡಿ ಮತದಾರ ಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ, ಹೊಸ ಸೇರ್ಪಡೆಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಿನಾಂಕ: ೨೭-೧೦-೨೦೨೩ ರಿಂದ ೦೯-೧೨-೨೦೨೩ರ ಅವಧಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲು ನಮೂನೆ ೬, ಮತದಾರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ-೭, ಮತದಾರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಅಥವಾ ಇತರೆ ದಾಖಲೆಗಳ ಜೋಡಣೆಗೆ ನಮೂನೆ-೬ಬಿ, ತಿದ್ದುಪಡಿ, ಬದಲಿ ಗುರುತಿನ ಚೀಟಿ, ಒಂದು ವಿಧಾನಸಭಾ ಮತಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಒಂದೇ ವಿಧಾನಸಭಾ ಕ್ಷೇತ್ರದಲ್ಲಿರುವ ಭಾಗಕ್ಕೆ ಸ್ಥಳಾಂತರಕ್ಕಾಗಿ ನಮೂನೆ-೮ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.