ಇಂಡಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ ಸಲ್ಲಿಸಿ ಎಚ್ಚರಿಕೆ
ಇಂಡಿ: ಜನ ಜಾನುವಾರುಗಳ ನೀರು ಕುಡಿಯುವ ಹಾಗೂ ಒಣಗುತ್ತಿರುವ ಬೆಳೆಗಳ ಸಲುವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದವರು ಗುರುವಾರ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಚಿಟ್ಟ ಹಲಗೆ ಬಾರಿಸುತ್ತಾ ಪ್ರತಿಭಟನೆ ಪ್ರಾರಂಭಿಸಿದ ಅವರು ಹೃದಯಭಾಗದ ಬಸವೇಶ್ವರ ವೃತ್ ಹಾದು ಪ್ರಮುಖ ರಸ್ತೆಯಲ್ಲಿ ಅಧಿಕಾರಿಗಳ ಮತ್ತು ಸರಕಾರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿ, ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿದರು.
ಆ ನಂತರ ಕಂದಾಯ ಉಪವಿಭಾಗ ಅಧಿಕಾರಿಗಳಿಗೆ ಗುತ್ತಿ ಬಸವಣ್ಣ ಕಾಲುಗೆ ನೀರು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಭೀಮಣ್ಣ ಉಪ್ಪಾರ, ಗುರಪ್ಪ ಅಗಸರ ಹಾಗೂ ಕೆಂಚಪ್ಪ ನಿಂಬಾಳ ಮಾತಾನಾಡಿದ ಅವರು, ಬಹುತೇಕ ನಿರಂತರವಾಗಿ ಕೆಟ್ಟ ಬರಗಾಲ ಅನುಭವಿಸುವ ಪ್ರದೇಶವಾಗಿದೆ. ಅದರಂತೆ ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈ ಕೊಟ್ಟು ಬೀಕರ ಬರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬರದ ಛಾಯೆಯಿಂದ ಕೊಳವೆ ಬಾವಿ, ತೆರದ ಬಾವಿ ನೀರಿಲ್ಲದೆ ನೆಲ ಕಚ್ಚಿವೆ.
ಆದರೆ ಸುಮಾರು ಹತ್ತು ವರ್ಷಗಳ ಕಾಲ ಕಷ್ಟು ಪಟ್ಟು ಬೆಳೆದ, ಫಲಕೊಡುವ ಲಿಂಬೆ, ದಾಳಿಂಬೆ ಮತ್ತು ಕೃಷಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಅದರಲ್ಲೂ ತಾಂಬಾ, ಗೊರನಾಳ, ಬೊಳೆಗಾಂವ, ಹಿರೇರೂಗಿ, ಇಂಡಿ, ಹಂಜಗಿ, ತಡವಲಗಾ, ಅಂಜುಟಗಿ ಮುಂತಾದ ಗ್ರಾಮಗಳಿಗೆ ನೀರು ಬಂದಿರುವುದಿಲ್ಲ. ಆದ್ದರಿಂದ ಜನ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ನೀರಿನ ಸಮಸ್ಯೆಯಾಗದಂತೆ ಅತಿ ಶೀಘ್ರದಲ್ಲೇ ಕಾಲುವೆಗೆ ನೀರು ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಅಕ್ಟೋಬರ್-30 ರಂದು ರಾಜ್ಯ ಹೆದ್ದಾರಿ ತಡೆದು ರೂಗಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಟ್ಟಪ್ಪಾ ಸಾಲೂಟಗಿ, ಬಸವರಾಜ ಹಂಜಗಿ, ಬಾಳು ಕೊಟಗೊಂಡ, ಭೀಮರಾಯ ಜೇವೂರ, ಸಿದ್ದಪ್ಪ ಅಗಸರ, ರವಿ ಹಲಸಂಗಿ, ಲಾಯಪ್ಪ ಉಪ್ಪಾರ, ಭೀಮಣ್ಣ ಗುಂದಗಿ, ಜಟ್ಟಪ್ಪ ತಳವಾರ, ವಿಠೊಬಾ ಲಚ್ಯಾಣ, ಸುರೇಶ ಜೇವೂರ, ಭೀಮ ಯಳಸಂಗಿ, ಹಣಮಂತ ಮಸಳಿ ಗಡ್ಡೆಪ್ಪ ಗಿಣ್ಣಿ, ಛಾಯಪ್ಪ ಹಳ್ಳಿ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.