ಟಾಸ್ಕಪೋರ್ಸ ಸಮಿತಿ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಅಧಿಕಾರಿಗಳಿಗೆ ಸೂಚನೆ
ಇಂಡಿ: ಮಳೆಯಾಗದ ಹಿನ್ನೆಲೆಯಲ್ಲಿ ೨೦೨೪ ಜೂನ್ ೮ ರ ವರೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಾಸ್ಕ ಪೋರ್ಸ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕುಡಿಯುವ ನೀರಿಗಾಗಿ ಆಣೆಕಟ್ಟಿನಲ್ಲಿ ೧೫ ಟಿಎಂ ಸಿ ನೀರು ಬೇಕಾಗುತ್ತದೆ. ಕಾರಣ ಜೂನ್ ವರೆಗೆ ನೀರು ಕಾಯದಿರಿಸಲು ಕೇಳಿಕೊಂಡರು. ಮತ್ತು ತಾಲೂಕಿನಲ್ಲಿಯ ಎಲ್ಲ ಕೆರೆಗಳನ್ನು ತುಂಬಬೇಕು ಎಂದರು. ಮತ್ತು ಕಾಲುವೆಗೆ ಕೊನೆಯ ಭಾಗದ ವರೆಗೂ ನೀರು ಹರಿಸಬೇಕು ಎಂದರು.
ತಾಲೂಕಿನಲ್ಲಿರುವ ಕೆರೆಗಳಿಗೆ ಎಷ್ಟು ನೀರು ಬೇಕು ಅದನ್ನು ತಿಳಿದುಕೊಂಡು ಈ ಸಲ ಪರಿಸ್ಥಿತಿ ಮತ್ತು ಸನ್ನಿವೇಶ ಬೇರೆ ಇದ್ದು ಅದನ್ನು ಹೇಗೆ ನಿರ್ವಹಿಸಲು ಸಾದ್ಯ ಎಂಬುದನ್ನು ತಿಳಿದುಕೊಂಡು ಬೇಸಿಗೆಯಲ್ಲಿ ನೀರಿಕ್ಷಿಸಿದಷ್ಟು ಪೂರೈಸಬೇಕಾಗುತ್ತದೆ ಎಂದರು.
ನಾರಾಯಣಪುರ ಜಲಾಶಯದ ಮುಖ್ಯ ಅಬಿಯಂತರಾದ ಆರ್. ಮಂಜುನಾಥ,ಭೀಮರಾಯನಗುಡಿ ಮುಖ್ಯ ಅಭಿಯಂತರ ಪ್ರೇಮಸಿಂಗ್,ರಾಂಪೂರ ಮುಖ್ಯ ಅಭಿಯಂತರ ರವಿಶಂಕರ, ಆಲಮಟ್ಟಿಯ ಶ್ರೀನಿವಾಸ, ರಮೇಶ ರಾಠೋಡ, ಗೋವಿಂದ ರಾಠೋಡ ಮಾತನಾಡಿ, ಡಿಸೆಂಬರ್ ೪ ರ ವರೆಗೆ ರೈತರ ಬೆಳೆಗಳಿಗಾಗಿ ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ. ಅದಲ್ಲದೆ ಕುಡಿಯುವ ನೀರಿಗಾಗಿ ಬೇಕಾಗುವ ೧೫ ಟಿಎಂಸಿ ನೀರನ್ನು ಕಾದಿರಿಸಲಾಗುವದು. ಗ್ರಾಮದ ಜನರಿಗೆ,ಅಡವಿ ವಸ್ತಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಮುಂಜಾಗೃತೆ ಕ್ರಮ ಕೈಕೊಳ್ಳಲಾಗುವದು ಎಂದರು.
ಕೃಷಿ ಇಲಾಖೆಯ ಮಹಾದೇವಪ್ಪ ಏವೂರ ಮಾತನಾಡಿದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಸಿಪಿಐ ಎಂ.ಎಂ.ಡಪ್ಪಿನ, ಮಲ್ಲಿಕಾರ್ಜುನ ಏವೂರ ಸೇರಿದಂತೆ ಕೃಷ್ಣಾ ನೀರಾವರಿ ಇಲಾಖೆ ಅಭಿಯಂತರರು, ಅಧಿಕಾರಿಗಳು ಪಾಲ್ಗೊಂಡಿದ್ದರು.