ವಿಜಯಪುರ: ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರೆ ಜೈವಿಕ ಸಂಪನ್ಮೂಲಗಳನ್ನು ಕಚ್ಚಾ ವಸ್ತುವಾಗಿ ಬಳಸಿ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರ ಆದಾಯ ದ್ವೀಗುಣಗೊಳಿಸುವ ಮುಖ್ಯ ಹೊಂದಿರುವ ಪ್ರಸಕ್ತ ೨೦೨೩-೨೪ನೇ ಸಾಲಿನ ಸೆಕೆಂಡರಿ ಕೃಷಿ ಕಾರ್ಯಕ್ರಮದಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಡಿ ವೈಯಕ್ತಿಕ ರೈತ ಫಲಾನುಭವಿಗಳು, ರೈತ ಉತ್ಪಾದಕ ಸಂಸ್ಥೆಗಳು-ಸ್ವಸಹಾಯ, ಗುಂಪು-ಸಹಕಾರಿ, ಸಂಘ-ಸೊಸೈಟಿಗಳು ಸೆಕೆಂಡರಿ ಕೃಷಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಶೇ.೫೦ರ ಸಹಾಯಧನದಲ್ಲಿ ಅನುಷ್ಠಾನಗೊಳಿಸಬಹುದಾಗಿದೆ. ಸದರಿ ಚಟುವಟಿಕೆಗಳ ಬಗ್ಗೆ ಆಸಕ್ತ ಫಲಾನುಭವಿಗಳು ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ನಿಗದಿತ ಅರ್ಜಿ ಪಡೆದು ದಿನಾಂಕ : ೧೦-೧೧-೨೦೨೩ರವರೆಗೆ ಸಲ್ಲಿಸಬಹುದಾಗಿದೆ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಕೆಂಡರಿ ಕೃಷಿ ಕಾರ್ಯಕ್ರಮದಡಿ ಮಾರುಕಟ್ಟೆ ವ್ಯವಸ್ಥೆ :ಅರ್ಜಿ ಆಹ್ವಾನ
Related Posts
Add A Comment