ಕಲಕೇರಿಯಲ್ಲಿ ೩೦ನೇ ಧಾರ್ಮಿಕ ವಿಜಯಮಹೋತ್ಸವ | ಸಾಧಕರಿಗೆ ಸನ್ಮಾನ | ತುಲಾಭಾರ
ಕಲಕೇರಿ: ಪ್ರತಿಯೊಬ್ಬರು ಧರ್ಮ ಕಾರ್ಯಗಳಲ್ಲಿ ಭಾಗಿಯಾಗಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಸಾಧಕರನ್ನು ಸಮಾಜಕ್ಕೆ ಪರಿಚಯ ಮಾಡಿಕೊಡುವದರಿಂದ ಅನೇಕ ಪ್ರತಿಭೆಗಳಿಗೆ ಇದು ಪ್ರೇರಣೆಯಾಗುತ್ತದೆ. ಹಲವಾರು ಸಾಧಕರು ಬೆರೆಯವರಿಗೆ ಗೊತ್ತಿಲ್ಲದೆ ತೆರೆಮರೆಯಲ್ಲಿ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಅಂತವರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಲಿ ಎಂದು ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಜೋಗುರ ಸಲಹೆ ನೀಡಿದರು.
ಗ್ರಾಮದ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಬುಧವಾರ ಸಂಜೆ ವಿಜಯದಶಮಿ ನಿಮಿತ್ಯವಾಗಿ ಹಮ್ಮಿಕೊಂಡ ೩೦ ನೇ ವರ್ಷದ ಧಾರ್ಮಿಕ ವಿಜಯಮಹೋತ್ಸವ ಹಾಗೂ ವಿವಿದ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ದೇವಿ ಉಪಾಸಕ ಮೋತಿಲಾಲ ಕುಲಕರ್ಣಿ ಅವರ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿ ಧಾಮಿಕ ವಿಜಯಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಗುಣದಾಳದ ಡಾ.ವಿವೇಕ ದೇವರು, ಕುಮಸಗಿಯ ಅಭಿನವ ವೇಂಕಟೇಶ್ವರ ಶ್ರೀಗಳು, ಗುಂಡಕನಾಳದ ಗುರುಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಕಲಕೇರಿಯ ಸಿದ್ದರಾಮ ಶ್ರೀಗಳು, ಹೀರೂರಿನ ಜಯಸಿದ್ದೇಶ್ವರ, ಶ್ರೀಗಳು, ಗದ್ದುಗೆಮಠದ ಶ್ರೀಗುರು ಮಡಿವಾಳೇಶ್ವರ ಶ್ರೀಗಳು ಇದ್ದರು.
೨೦೨೩-೨೪ ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಿಂಗಯ್ಯ ಹಿರೇಮಠ, ಅಹಾರ ಇಲಾಖೆಯ ಬಸವರಾಜ್ ಭೊವಿ, ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಹ್ಮದ್ ಸಿರಸಗಿ ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪರಶುರಾಮ ಬೇಡರ್ ಅವರನ್ನು ಹಾಗೂ ೨೦೨೩ ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸೂಗಮ್ಮ ಬಿರಾದಾರ, ಶ್ರೇಯಾ ಶ್ರೀಗಿರಿ, ಮಡಿವಾಳಮ್ಮ ಸಂದಿಮನಿ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದೇವಿ ಉಪಾಸಕ ಮೋತಿಲಾಲ್ ಕುಲಕರ್ಣಿ ಅವರ ೫೦ ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಗೆಳೆಯರ ಬಳಗದವರು ಬೆಲ್ಲದ ಅಚ್ಚುಗಳಿಂದ ಅವರ ತುಲಾಭಾರವನ್ನು ನೆರವೇರಿಸಿ ಧನ್ಯತಾಭಾವ ಮೆರೆದರು.
ಸದಾನಂದ ಹಿರೇಮಠ, ಕುಮಾರಸ್ವಾಮಿ ಜಾಲಹಳ್ಳಿಮಠ, ಸುನೀಲಗೌಡ ಕೊಡಗಾನೂರ, ಸಂಗನಗೌಡ ಪಾಟೀಲ, ಶಾಂತಗೌಡ ಪಾಟೀಲ, ಶಿವಪುತ್ರಪ್ಪ ಕಡಕೋಳ, ಮೃತ್ಯೂಂಜಯ ಮಠಪತಿ, ಶಾಂತಪ್ಪ ಪಟ್ಟಣಶೆಟ್ಟಿ, ಮಲ್ಲನಾಥ ದೇಸಾಯಿ, ಕುಮಾರ ದೇಸಾಯಿ, ಮನು ಪತ್ತಾರ, ನಿಂಗನಗೌಡ ಗುಂಡಕನಾಳ, ಬಸವರಾಜ ಹೆಬ್ಬಾಳ, ಅರವಿಂದ ಬೆನಾಳ, ದೇವಿಂದ್ರ ಜಂಬಗಿ, ಯಮನೂರಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.