ಅ.೨೯ ರಂದು ಕುಂಟೋಜಿ ಗ್ರಾಮದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆ
ಮುದ್ದೇಬಿಹಾಳ: ಅ.೨೯ ರಂದು ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಗ್ರಾಮದ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ತಾಲೂಕಿನ ಎಲ್ಲ ಸಮಾಜಗಳ ಮುಖಂಡರು, ಗಣ್ಯ ವರ್ತಕರು, ರಾಜಕೀಯ ಮುಖಂಡರು, ಹಿರಿಯರು, ವಕೀಲರು, ಪತ್ರಕರ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ವಿನಂತಿಸಿದರು.
ಈ ಕುರಿತು ಕುಂಟೋಜಿ ಗ್ರಾಮದ ಹಿರಿಯರು ಗ್ರಾಮದ ಹಿರೇಮಠದಲ್ಲಿ ಕರೆದಿದ್ದ ಚರ್ಚಾಕೂಟದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಚನ್ನವೀರ ದೇವರು ಜಾತಿ, ಮತ, ಪಂಥ ಎನ್ನದೇ ಎಲ್ಲ ವರ್ಗದವರಿಗೆ ಬೇಕಾದವರು. ಯಾವುದೇ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದರೂ ಓಡಿ ಬಂದು ಪಾಲ್ಗೊಳ್ಳುತ್ತಾರೆ. ಅವರ ಪಟ್ಟಾಧಿಕಾರ ಕಾರ್ಯಕ್ರಮವನ್ನು ನೆರವೇರಿಸಿ ಕೊಡುವ ಸೌಭಾಗ್ಯ ನಮ್ಮೆಲ್ಲರಿಗೂ ದೊರಕಿದ್ದು ನಮ್ಮ ಭಾಗ್ಯ. ಎಲ್ಲ ಸಮುದಾಯಗಳ ಮುಖಂಡರು ತನು, ಮನ, ಧನದಿಂದ ಭಾಗಿಯಾಗಿ ಹಿಂದೆ ನೋಡಿರದ ಮುಂದೆ ನಡೆಯದಹಾಗೆ ಅತ್ಯಂತ ಅದ್ಧೂರಿಯಾಗಿ ಪ್ರತಿಯೊಂದು ಕಾರ್ಯಕ್ರಮವನ್ನು ನಡೆಸಿಕೊಡೋಣ ಎಂದರು.
ಈ ವೇಳೆ ಗಣ್ಯ ವ್ಯಾಪಾರಸ್ಥ ಶರಣು ಸಜ್ಜನ ಮಾತನಾಡಿದರು.
ಇದೇ ವೇಳೆ ಪ್ರಮುಖರಾದ ಬಿ.ಎಸ್.ಹೂಗಾರ, ಬಿ.ಕೆ.ಬಿರಾದಾರ, ನಿವೃತ್ತ ಯೋಧ ನಾಗಲಿಂಗಯ್ಯ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಬಿ.ಹೂಗಾರ, ಸಂಗಮೆಶ ಹೂಗಾರ ಮಾತನಾಡಿ, ಡಾ.ಚನ್ನವೀರ ದೇವರು ತಮ್ಮ ಜೀವನವನ್ನೇ ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ, ಅವರಿಗೆ ಪಟ್ಟಾಧಿಕಾರವನ್ನು ನೆರವೇರಿಸಿ ಗೌರವಿಸುವ ಜವಾಬ್ದಾರಿ ಸದ್ಭಕ್ತರದಾಗಿದ್ದು ಎಲ್ಲ ಪ್ರಮುಖರೂ ತಪ್ಪದೇ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಊರಿನ ಎಲ್ಲ ಗುರು ಹಿರಿಯರು ಪಟ್ಟಾಧಿಕಾರ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಭವಿಷ್ಯದಲ್ಲಿ ನಭೂತೋ ನಭವಿಷ್ಯತಿ ಅನ್ನುವ ರೀತಿಯಲ್ಲಿ ನಡೆಸಿಕೊಡಿವದಾಗಿ ಎಲ್ಲರೂ ಕೈ ಮುಂದೆ ಮಾಡಿ ಪ್ರತಿಜ್ಞೆ ಮಾಡಿದರು. ಈ ವೇಳೆ ಬಸವೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಗುರು ಸುಲ್ಲೊಲ್ಳಿ, ಖಜಾಂಚಿ ಬಸಲಿಂಗಪ್ಪಗೌಡ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಜಗದೀಶ್ ಲಮಾಣಿ, ಸಂಗನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಬಸನಗೌಡ ಪಾಟೀಲ, ಕೆ.ಜಿ.ಬಿರಾದಾರ, ಮಳೆಪ್ಪಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಮಾಂತಗೌಡ ಬಿರಾದಾರ, ಎಸ್ ಎಸ್.ಎನ್.ಬಳೂತಿ ವಕೀಲರು, ಶರಣು ಪಲ್ಲೆದ, ಮುದಕಣ್ಣ ಪಲ್ಲೆದ, ಘನಮಠ ಹೆಬ್ಬಾಳ, ಗುರುಪಾದ ಹೆಬ್ಬಾಳ, ಶಿವಣ್ಣ ವನರೊಟ್ಟಿ, ಸೇರಿದಂತೆ ಶ್ರೀ ಮಠದ ಸದ್ಭಕ್ತರು ಭಾಗಿಯಾಗಿದ್ದರು.