ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ೧೪ವರ್ಷ ೫ತಿಂಗಳ ಬಾಲಕ ಸಂಗಮೇಶ ಪಡಶೆಟ್ಟಿ ಕಾಣೆಯಾಗಿರುವ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಬ್ಬೇವಾಡ ಗ್ರಾಮದ ಅಶೋಕ ಪಡಶೆಟ್ಟಿ ಅವರ ಪುತ್ರ ಸಂಗಮೇಶ ಪಡಶೇಟ್ಟಿ ಸೆ.೭ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ತಂದೆ-ತಾಯಿಗೆ ಬಸ್ ನಿಲ್ದಾಣದ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದಾನೆ. ಆದರೆ, ಬಳಿಕ ಮನೆಗೆ ಮರಳದೆ ಕಾಣೆಯಾಗಿದ್ದಾನೆ. ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆ ಅಶೋಕ ಪಡಶೆಟ್ಟಿ ಅವರು ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

