ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರ ಹಾಗೂ ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹೇಳಿದರು.
ನಗರದ ಡಾ. ಬಾಬು ಜಗಜೀವನರಾಮ ಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಪೌರ ಕಾರ್ಮಿಕರು ಕಸ ಗುಡಿಸುವದು, ಚರಂಡಿ ಸ್ವಚ್ಛತೆ ಮತ್ತು ಕಸ ಸಂಗ್ರಹಿಸುವ ಕೆಲಸ ಮಾಡುತ್ತಾರೆ. ತಮ್ಮ ಆರೋಗ್ಯದ ಕಡೆಗೆ ಗಮನ ನೀಡದೇ ನಗರ ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಾರೆ ಎಂದರು.
ನಗರದ ಓಂಕಾರ ಆಶ್ರಮದ ಸ್ವರೂಪಾನಂದ ಶ್ರೀಗಳು ಮಾತನಾಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಅತ್ಯಂತ ಕಡಿಮೆ ಸಂಬಳ ಇದೆ.ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಯಾವದೇ ಸರಕಾರ ಅವರ ಕೆಲಸ ಖಾಯಮಾತಿ ನೀಡಿಲ್ಲ ಎಂದರು.
ಪೌರಾಯುಕ್ತ ಶಿವಾನಂದ ಪೂಜಾರಿ, ದೀಪಾಲಯ ಸಮಾಜ ಸೇವಾ ಕೇಂದ್ರದ ಪವಿತ್ರಾ ಅವರು ಪೌರ ಕಾರ್ಮಿಕರ ಕುರಿತು ಮಾತನಾಡಿದರು.
ಮಾಜಿ ಸದಸ್ಯರಾದ ಶಬ್ಬೀರ ಖಾಜಿ, ರೇಣುಕಾ ಉಟಗಿ, ಭೀಮಾಶಂಕರ ಮೂರಮನ, ಶ್ರೀಶೈಲ ಪೂಜಾರಿ ವೇದಿಕೆಯ ಮೇಲಿದ್ದರು.
ಸಿಬ್ಬಂದಿ ವರ್ಗದ ಪ್ರವೀಣ ಸೋನಾರ, ಅಸ್ಲಮ್ ಖಾದಿಮ್ ಸಂಗೀತಾ ಕೋಳಿ, ಅನುಸೂಯಾ ಕಂಠಿಕರ ರೇಖಾ ದರೆನ್ನವರ, ಅಜರ ಶೇಖ, ಕೃಷ್ಣಾ ರಾಠೋಡ, ವಿರೇಶ ಹಿರೇಮಠ, ಮುತ್ತು ಮುರಾಳ, ಮತ್ತಿತರಿದ್ದರು.
ಕರ್ನಾಟಕ ಪೌರ ಸೇವಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ, ತಾಲೂಕಾ ಅಧ್ಯಕ್ಷೆ ಲಕ್ಷ್ಮಿ ಕಾಲೇಭಾಗ, ಮರೆಪ್ಪ ಗುಡುಮಿ, ಶಿರಸು ಹಾದಿಮನಿ ಮಾಳಪ್ಪ ಹೆಳವರ ಮತ್ತಿತರಿದ್ದರು.
ಇದೇ ವೇಳೆ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

