ಢವಳಗಿ: ಸಮೀಪದ ಗುಂಡಕರ್ಜಗಿ ಗ್ರಾಮದ ಮಹಿಬೂಬಸುಬಾನಿ ಜಾತ್ರಾ ಮಹೋತ್ಸವ ಅ.26 ಗುರುವಾರದಿಂದ ಅ.28 ಶನಿವಾರದ ವರೆಗೆ ಅದ್ದೂರಿಯಾಗಿ ನಡೆಯಲಿದೆ.
26 ಗುರುವಾರದಂದು ಗಂಧ ಏರುವುದು, ಮದ್ದು ಸುಡುವುದು, ಅಂದೆ ರಾತ್ರಿ 10 ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶಿವಭಜನೆ ನಡೆಯುವುದು. 27 ಶುಕ್ರವಾರದಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಕಾಶಿಲಿಂಗೇಶ್ವರನಿಗೆ ಅಭಿಷೇಕ ನಂತರ ಕೋಲಾಟ, ವಾದ್ಯ ವೈಭವದೊಂದಿಗೆ ಶರಣರನ್ನು ದರ್ಗಾದವರೆಗೆ ಮೆರವಣಿಗೆಯ ಮುಖಾಂತರ ಕರೆತರುವುದು, ನಂತರ 11ಗಂಟೆಯಿಂದ ಎತ್ತಿನಗಾಡಿ ರೇಸ್ ಜರುಗುವುದು. ಪ್ರಥಮ ಬಹುಮಾನ 15001, ದ್ವೀತಿಯ 10001, ತೃತೀಯ7501, ಚತುರ್ಥಿ 5001 ರೂ ಬಹುಮಾನವನ್ನು ಆಯೋಜಿಸಲಾಗಿದೆ. 28 ಶನಿವಾರದಂದು ಮುಂಜಾನೆ11 ಗಂಟೆಗೆ ರಾಜ್ಯ ಮಟ್ಟದ ತೇರಬಂಡಿ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಥಮ ಬಹುಮಾನ 25001 ರೂ, ದ್ವೀತಿಯ 15001, ತೃತೀಯ 10001, ಚತುರ್ಥಿ 7501, ಪಂಚಮಿ 5001 ಇರುವುದು. ಮತ್ತು ಅಂದೇ ರಾತ್ರಿ 10 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕ ಇರುವುದು.
ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ 8105859118,988010976 ಸಂಪರ್ಕಿಸ ಬಹುದು ಎಂದು ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment