ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ? ಎದೆ ಸಿಳಿದರೆ ಮೂರು ಅಕ್ಷರವಿಲ್ಲ ಎಂದು ಮುಲ್ಲಾ ಸಮುದಾಯಕ್ಕೆ ನೀಡಲಾಗಿದೆ ಎನ್ನಲಾದ ಹೇಳಿಕೆ ಖಂಡಿಸಿ ಹಾಗೂ ಸಮುದಾಯದ ಗೌರವ ಮತ್ತು ಸಾಮಾಜಿಕ ಗುರುತಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಲ್ಲಾ ಸಮುದಾಯ ಬಂದುಗಳು ತಹಶೀಲ್ದಾರ ಕರೆಪ್ಪ ಬೆಳ್ಳಿ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಮುಸ್ಲಿಂ ಹಿತ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಎಂ.ಎ.ಖತೀಬ ಮಾತನಾಡಿ, ಇತ್ತೀಚೆಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧದ. ಎದೆ ಸಿಳಿದರೆ ಮೂರು ಅಕ್ಷರವಿಲ್ಲ. ವಿನಾಃಕಾರಣ ಮಾತನಾಡೋಕೆ ಬಂದಿದ್ದಾರೆ. ಸಾರ್ವಜನಿಕವಾಗಿ ಮಾತನಾಡಿದ್ದು ಮುಲ್ಲಾ ಸಮುದಾಯಕ್ಕೆ ನೋವುಂಟು ಮಾಡಿದೆ. ನಾವೇನು ಭಾರತೀಯರಲ್ಲವೇ, ಬಿಜೆಪಿಯವರು ಸಮುದಾಯ ಸಮುದಾಯಗಳ ನಡುವೆ ಕಂದಕ ಸೃಷ್ಠಿ ಮಾಡಿ ಹಿಂದೂ ಮುಸ್ಲಿಂರಲ್ಲಿ ದ್ವೇಶ ಹುಟ್ಟು ಹಾಕುತ್ತಿದ್ದಾರೆ. ಇವರ ತಲೆಯಲ್ಲಿ ಹಿಂದೂ ಮುಸ್ಲಿಂರಲ್ಲಿ ಜಗಳ ಹಚ್ಚಿ ಹಿಂದೂ ಮತ ಬ್ಯಾಂಕ ಮಾಡುವ ಹುನ್ನಾರು ನಡೆಸಿದ್ದಾರೆ. ವಿನಾಃಕಾರಣ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಠಿಸುವುದನ್ನು ಕೈಬಿಟ್ಟು ಸಾರ್ವಜನಿಕ ಬೆಳವಣಿಗೆ ಮಾಡಬಹುದಾದ ಹೇಳಿಕೆಗಳನ್ನು ನೀಡಿ ಇಲ್ಲದಿದ್ದರೆ ಮುಂದಾಗುವು ಅನಾಹುತಗಳಿಗೆ ನಿಮ್ಮನ್ನೆ ಹೊಣೆಗಾರರನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಎಂಎ ತಾಲೂಕಾಧ್ಯಕ್ಷ ಡಾ.ಅಬೂಬಕರ್ ಮುಲ್ಲಾ ಮಾತನಾಡಿದರು.
ಈ ವೇಳೆ ಉಪಾಧ್ಯಕ್ಷ ಮುನವಾರ ಮುಲ್ಲಾ, ಅಬ್ದುಲ್ ಮುಲ್ಲಾ, ಮೊಹಮದ್ ಹನೀಫ್ ಮುಲ್ಲಾ, ರಫೀಕ್ ಮುಲ್ಲಾ, ಕೆ.ಡಿ.ಮುಲ್ಲಾ, ಅಬು ಖತೀಬ, ಶಫಿಕ್ ಮುಲ್ಲಾ, ಮೌಲಾನ್ ಅಶ್ಪಾಕ ಕರಜಗಿ ಸೇರಿದಂತೆ ಮುಲ್ಲಾ ಪದಾಧಿಕಾರಿಗಳು, ಮುಸ್ಲಿಂ ಹಿತ ರಕ್ಷಣೆ ಪದಾಧಿಕಾರಿಗಳು ಇದ್ದರು.

