ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ರ ಸಾಮಾಜಿಕ ಕಳಕಳಿಗೆ ರೈತರ ಮೆಚ್ಚುಗೆ :ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಡಗಾನೂರಿನಿಂದ ಇಂಗಳಗಿಗೆ ಸಂಪರ್ಕಿಸುವ ೨೦-೩೦ ವರ್ಷದ ಹಳೆ ರಸ್ತೆ ಸಂಪೂರ್ಣವಾಗಿ ಮುಳ್ಳು-ಕಂಟಿಗಳಿಂದ ಸಂಪೂರ್ಣ ಮುಚ್ಚಿಹೋಗಿದ್ದ ರಸ್ತೆಯನ್ನು ರೈತಾಪಿ ಜನರ ವಿನಂತಿಯ ಮೇರೆಗೆ ಮತಕ್ಷೇತ್ರದ ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಮುಳ್ಳುಕಂಠಿ ಕಡಿಸುವದರೊಂದಿಗೆ ಗರಸು ಮಣ್ಣು ಹಾಕಿಸಿ ರಸ್ತೆ ದುರಸ್ಥಿ ಮಾಡಿಸಿ ರೈತಾಪಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ರಸ್ತೆಯಲ್ಲಿ ಮುಳ್ಳು ಕಂಠಿ-ತಗ್ಗು ದಿನ್ನಿಗಳು ತುಂಬಿಕೊಂಡ ಪರಿಣಾಮವಾಗಿ ಯಾವುದೇ ವಾಹನಗಳ ಸಂಚಾರ ಮಾತ್ರವಲ್ಲದೆ ಕಾಲ್ನಡಿಗೆಯಲ್ಲಿಯೂ ತೆರಳುವುದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಈ ರಸ್ತೆಯ ಮೂಲಕ ತಮ್ಮ ಜಮೀನುಗಳಿಗೆ ತೆರಳುವ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು ಅಲ್ಲಿನ ರೈತ ಬಾಂಧವರು ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರ ಗಮನಕ್ಕೆ ತರುವದರೊಂದಿಗೆ ರಸ್ತೆ ದುರಸ್ಥಿಯ ಸಾಮಾಜಿಕ ಸೇವೆ ಸಲ್ಲಿಸಬೇಕೆಂಬ ಮನವಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ ಯಡಿಯಾಪೂರ ಅವರು ರೈತರ ಕಷ್ಟವನ್ನು ಮನಗಂಡು ವಿಳಂಬ ಮಾಡದೆ ಸ್ವಂತ ಖರ್ಚಿನಲ್ಲಿ ಸುಮಾರು ೧.೫೦ ಕಿ.ಮೀ. ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ, ಮಣ್ಣು, ಕಲ್ಲು ಹಾಗೂ ಗರಸು ಹಾಕಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಈ ಕಾರ್ಯದಿಂದ ಸಂತಸಗೊಂಡಿರುವ ಈ ರಸ್ತೆಯನ್ನು ಬಳಸುವ ರೈತರಾದ ಬಸಂತರಾಯ ಕೊಣ್ಣೂರ, ಶಿವಾನಂದ ಕೊಣ್ಣೂರ, ಮಲ್ಲಣ್ಣ ಕೊಣ್ಣೂರ, ಸಿದ್ದು ಹುಗ್ಗಿ, ಮಾತಾಬಸಾಬ ಮುಜಾವರ, ಸಿದ್ದನಗೌಡ ಕೊಣ್ಣೂರ, ಸುರೇಶ್ ಕೊಣ್ಣೂರ, ಶ್ರೀಶೈಲ ಕೊಣ್ಣೂರ, ರಾಮನಗೌಡ ಕೊಣ್ಣೂರ, ಶಂಕರಗೌಡ ಕೊಣ್ಣೂರ, ಭೀಮನಗೌಡ ಕೊಣ್ಣೂರ ಸೇರಿದಂತೆ ಸುತ್ತಮುತ್ತಲಿನ ರೈತ ಬಾಂದವರು ಬಸನಗೌಡ ಪಾಟೀಲ(ಯಡಿಯಾಪೂರ) ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

