ವಿಜಯಪುರ: ಪೂಜ್ಯ ಶಿವಯ್ಯ ಮಹಾಸ್ವಾಮೀಜಿ ಆಶೀರ್ವಾದದ ನೆರಳಲ್ಲಿ ಭಕ್ತರೆಲ್ಲರೂ ಸೇರಿ ಪ್ರಾರಂಭ ಮಾಡಿರುವ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗೀಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಶ್ರೀಮಠದ ಭಕ್ತರ ಪಾಲಿನ ಭಾಗ್ಯನಿಧಿ ಆಗಲಿ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಎಂ.ಬಿ.ಪಾಟೀಲ ಹೇಳಿದರು. ಗುರುವಾರ ನಗರದ ಸ್ಟೇಷನ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸದಾಶಿವ ಶಿವಯೋಗೀಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆಯ ವಿಜಯಪುರ ಶಾಖೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಶಿವಯ್ಯ ಮಹಾಸ್ವಾಮೀಜಿ ಮಾತನಾಡಿ, ಹಣವನ್ನು ಉಳಿಸುವ, ಬಳಸುವ, ಅದನ್ನು ಬಳಸಿ ಬೆಳೆಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಸದಾಶಿವನ ಆಶೀರ್ವಾದದ ನೆರಳಲ್ಲಿ ಈ ಸಂಸ್ಥೆ ಭಕ್ತರ ಕಾಮಧೇನು ಆಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಶಾಸಕ ವಿಠಲ ಕಟಕದೋಂಡ, ಮಾಜಿ ಶಾಸಕ ರಾಜು ಆಲಗೂರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಬಸವರಾಜ ಕೌಲಗಿ, ಡಾ. ಮಹಾಂತೇಶ ಬಿರಾದಾರ, ಡಾ.ಗಂಗಾಧರ ಸಂಬಣ್ಣಿ, ಬಾಬುಗೌಡ ಬಿರಾದಾರ, ಎಚ್.ಎಮ್.ಬಿಸಿನಾಳ, ಸಿದ್ದು ಗೌಡನವರ, ಭೀಮಾಶಂಕರ ಹದನೂರ, ಸದಾಶಿವ ಚಿಕರೆಡ್ಡಿ, ಬಿಎಸ್.ಬಿರಾದಾರ, ಹನುಮಂತ ಚಿಂಚಲಿ, ಈರಣ್ಣ ಪಟ್ಟಣಶೆಟ್ಟಿ, ರಾಜು ಸಕ್ರಿ, ಎನ್ ಆರ್ ಪಾಟೀಲ, ಮಾದನ ಶೆಟ್ಟಿ, ರಾಜು ಗಚ್ಚಿನಮಠ, ಉಮೇಶ ವಂದಾಲ, ಶಿವಾನಂದ ಬುಂಯಾರ, ಅಪ್ಪಾಸಾಹೇಬ ಕೋಟ್ಯಾಳ, ಶರಣಪ್ಪ ಬಬಲೇಶ್ವರ, ಈರಪ್ಪ ಮೋದಿ, ಅಶೋಕ ತಿಮಶೆಟ್ಟಿ, ಎಚ್.ಆರ್.ಮಾಚಪ್ಪನವರ, ಬಸವರಾಜ ಆಸಂಗಿ ಸೇರಿದಂತೆ ಸಾವಿರಾರು ಜನ ಶ್ರೀಮಠದ ಭಕ್ತರು ಸೌಹಾರ್ದ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.


