ಮನಗೂಳಿ ಸಂಗನಬಸವ ಮಂಗಲ ಕಾರ್ಯಾಲಯದ ಲೋಕಾರ್ಪಣೆಯಂಗವಾಗಿ ಫೆ.3-4 ರಂದು ವಿವಿಧ ಕಾರ್ಯಕ್ರಮಗಳು
ಬಸವನಬಾಗೇವಾಡಿ: ನಾಡಿನ ಮಠ-ಮಾನ್ಯಗಳು ಆಧ್ಯಾತ್ಮ ಸಂದೇಶ ಸಾರುವ ಜೊತೆಗೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಿಂದ ನಿರ್ಮಾಣಗೊಂಡಿರುವ ಸಂಗನಬಸವ ಮಂಗಲ ಕಾರ್ಯಾಲಯದ ಲೋಕಾರ್ಪಣೆಯಂಗವಾಗಿ ೨೦೨೪ ರ ಫೆ. ೩ ಮತ್ತು ೪ ರಂದು ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸಿ ಸ್ಮರಣೀಯವಾಗಿಸೋಣವೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸಂಗನಬಸವ ಮಂಗಲ ಕಾರ್ಯಾಲಯ ಲೋಕಾರ್ಪಣೆ ಕಾರ್ಯಕ್ರಮದಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಗನಬಸವ ಮಂಗಲ ಕಾರ್ಯಾಲಯ ಲೋಕಾರ್ಪಣೆಯಂಗವಾಗಿ ಶ್ರೀಮಠವು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹಗಳನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ನೆರವೇರಿಸಬೇಕಾಗಿದೆ. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪೂಜ್ಯರಿಂದ ೨೫ ಮಂಟಪ ಪೂಜೆ, ಧರ್ಮಸಭೆ, ರಾಜ್ಯಮಟ್ಟದ ಸಂಗನಬಸವ ಶ್ರೀ ಪ್ರಶಸ್ತಿ ಪ್ರದಾನ, ನೂತನ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದ ಪೂಜ್ಯರು ಆಯೋಜನೆ ಮಾಡಲು ಸಂಕಲ್ಪ ಮಾಡಿದ್ದಾರೆ. ಶ್ರೀಮಠವು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ನನ್ನ ಸಹಾಯ-ಸಹಕಾರ ಸದಾ ಇದೆ ಎಂದ ಅವರು, ಈ ಎಲ್ಲ ಕಾರ್ಯಕ್ರಮಗಳನ್ನು ತನು-ಮನ-ಧನದಿಂದ ಸಹಾಯ-ಸಹಕಾರ ನೀಡುವ ಮೂಲಕ ಎಲ್ಲರೂ ಸೇರಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಿ ಮಾಡಬೇಕೆಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ನಂದವಾಡಗಿಯ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಹಾಸಿಂಪೀರ ವಾಲೀಕಾರ, ರಾಜೇಂದ್ರ ಪಾಟೀಲ, ರಮೇಶ ಸೂಳಿಭಾವಿ, ಬಾಳು ಕುಮಶಿ, ಅಶೋಕಗೌಡ ಪಾಟೀಲ, ಬಸವರಾಜ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಹನಮಂತ ಸಾರವಾಡ, ಚನ್ನಗೌಡ ಪಾಟೀಲ, ಮಲ್ಲು ದೇಸಾಯಿ, ಬಸನಗೌಡ ನರಸಗೊಂಡ, ಅಶೋಕ ದೇಸಾಯಿ, ದಯಾನಂದ ಹಿರೇಮಠ, ಬಸವರಾಜ ಸಿದ್ದಾಪೂರ, ಭೀಮಗೊಂಡ ಬಿರಾದಾರ, ಅಶೋಕ ಗುಡದಿನ್ನಿ, ಈರಣ್ಣ ದೊಡ್ಡಮನಿ, ಸುಭಾಸ ಕಲ್ಯಾಣಿ ಇತರರು ಭಾಗವಹಿಸಿದ್ದರು.