ವಿಜಯಪುರ: ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ಐಟಿಐ ಉದ್ಯೋಗ ಸೊಸೈಟಿ ಮೂಲಕ ಸಿಎಂಕೆಕೆವೈ ಅಡಿಯಲ್ಲಿ ಜೂನಿಯರ್ ರೋಬೊಟ್ ಆಪರೇಟರ್ & ಪ್ರೋಗ್ರಾಮರ್ ಮಟೇರಿಯಲ್ ಹ್ಯಾಂಡಲಿಂಗ್, ಬ್ಯಾಟರಿ ಇಲೆಕ್ಟ್ರಿಕ್ ವ್ಹಿಕಲ್ ಜ್ಯೂನಿಯರ್ ಟೆಕ್ನಿಶಿಯನ್, ಇಲೆಕ್ಟ್ರಿಶಿಯನ್ ಡೊಮೆಸ್ಟಿಕ್ ಸಲೂಷನ್ ಹಾಗೂ ಟಿವಿ ರಿಪೇರ ಟೆಕ್ನಿಷಿಯನ್ ಅಲ್ಪಾವಧಿ ಕೋರ್ಸ್ಗಳನ್ನು ದಿನಾಂಕ : ೦೨-೧೧-೨೦೨೩ ರಿಂದ ಪ್ರಾರಂಭಿಸಲಾಗುವುದು.
ಈ ತರಬೇತಿಗಳು ಉದ್ಯಮದಲ್ಲಿ ಉದ್ಯೋಗ ಪಡೆಯಲು ಅನುಕೂಲಕರವಾಗಿವೆ. ಹಾಗೂ ಈ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ರೋಬೋಟಿಕ್ ಪ್ರೊಗ್ರಾಮ, ಬ್ಯಾಟರಿ ವ್ಹಿಕಲ್ ಟೆಕ್ನಿಶಿಯನ್, ಇಲೆಕ್ಟಿçಷಿಯನ್ & ಆಫ್ಟರ್ ಸೇಲ್ಸ್ ಆಂಡ್ ಸರ್ವಿಸ್ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಗಳು ಲಭವಿರುತ್ತದೆ.
ಕೋರ್ಸ್ಗಳಿಗೆ ೧೧ ಸಾವಿರ ರೂ. ಶುಲ್ಕವನ್ನು ನಿಗದಿಗೊಳಿಸಿದ್ದು, ಕೇವಲ ೩೬ ಜನರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಜಯಪುರ ಕಾರ್ಯಾಲಯ ದೂ:೦೮೩೫೨-೨೬೦೩೬೦, ಮೊ: ೯೫೯೧೫೭೧೩೮೯, ೯೯೬೪೧೫೨೦೪೦ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment