ಸ್ವಾಮಿ ವಿವೇಕಾನಂದರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಬದ್ಧ
ಸಿಂದಗಿ: ನಗರದಲ್ಲಿ ಬಹು ದಿನಗಳಿಂದ ನೆನಗುದಿಗೆ ಬಿದ್ದ ಸ್ವಾಮಿ ವಿವೇಕಾನಂದ ವೃತ್ತದ ಜಿರ್ಣೋದ್ದಾರ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಅತೀ ಶೀಘ್ರದಲ್ಲೇ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರ ರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಹೋರಾಟ, ದೈರ್ಯ, ಸ್ವಾತಂತ್ರ್ಯ, ಸ್ವಾಭಿಮಾನ ಎಂದರೆ ಏನು ಎಂಬುದನ್ನು ೨೪೫ ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಮಾಡಿದ ಸಾಧನೆ, ಸಾಹಸ, ತ್ಯಾಗ, ಹೋರಾಟದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿ ತಾಲೂಕಿನ ನಾದ ಕೆಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ. ಬಂಡಗರ ಉಪನ್ಯಾಸ ನೀಡಿ ಮಾತನಾಡಿದರು.
ಈ ವೇಳೆ ಆಸಂಗಿಹಾಳದ ಆರೂಢಮಠದ ಶಂಕರಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು. ಬಸವರಾಜ ಸೋಮಾಪೂರ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಇಒ ಆರೀಫ್ ಬಿರಾದಾರ, ಅಶೋಕ ಅಲ್ಲಾಪೂರ, ಅಶೋಕ ತೆಲ್ಲೂರ, ಸೋಮನಗೌಡ ಬಿರಾದಾರ, ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಕಾರ್ಯದರ್ಶಿ ಆನಂದ ಶಾಬಾದಿ, ಆರತಿ ಖೈನೂರ, ಸಿದ್ದಲಿಂಗಪ್ಪ ಕೋರವಾರ, ಸುರೇಶ ಮ್ಯಾಗೇರಿ, ಜಿ.ಎಸ್.ರೋಡಗಿ, ಆಯ್.ಎ ಮಕಾಂದಾರ, ಮಲ್ಲಿಕಾರ್ಜುನ ಮಾಲಗಾರ, ನಿಖಿಲಅಹ್ಮದ್ ಖಾನಾಪುರ, ಚೇತನ ಭಾಸಗಿ, ನಿತ್ಯಾನಂದ ಯಲಗೋಡ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಮುತ್ತು ಶಾಬಾದಿ, ರಮೇಶ ಯಾಳಗಿ ಸೇರಿದಂತೆ ಸಮಾಜದ ಹಿರಿಯರು, ಪ್ರಮುಖರು ಇದ್ದರು.

