ಸಿಂದಗಿ: ನಗರದಲ್ಲಿರುವ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಆದರೆ ದಲಿತ ಶರಣ, ಮಾದರ ಚನ್ನಯ್ಯ ವೃತ್ತಕ್ಕೆ ಉದ್ದೇಶ ಪೂರ್ವಕವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಂದು ದೀಪಾಲಂಕಾರ ಮಾಡದೇ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ಆದಿಜಾಂಬವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರದಲ್ಲಿರುವ ಬಹುತೇಕ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಿದ್ದಾರೆ. ಆದರೆ ಮಾದಾರ ಚನ್ನಯ್ಯ ವೃತ್ತಕ್ಕೆ ದೀಪಾಲಂಕಾರ ಮಾಡದೇ ಅಧಿಕಾರಿಗಳು ಅವಮಾನಿಸಿದ್ದು ಖಂಡನೀಯ. ಈ ರೀತಿಯಾಗಿ ಮಾಡುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಇಂತಹ ತಪ್ಪುಗಳನ್ನು ಮಾಡಿದ್ದಾರೆ. ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾತಿಯತೆಯನ್ನು ಪೋಷಿಸದೇ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ವೇಳೆ ಏಕನಾಥ ದ್ವಾಶ್ಯಾಳ, ರಮೇಶ ಗುಬ್ಬೇವಾಡ, ಮಲ್ಲೇಶಿ ಕೆರೂರ, ರಮೇಶ ಖಾನಾಪೂರ, ಚಂದ್ರಶೇಖರ ದೇವೂರ, ಪರಶುರಾಮ ಬನ್ನೇಟ್ಟಿ, ಸಾಯಬಣ್ಣ ಪರದಾಳ, ಶ್ರೀಕಾಂತ ದೇವೂರ, ರಾಮು ವಗ್ಗರ, ಗಂಗಾಧರ ಮಳ್ಳಿ, ರಾಮಚಂದ್ರ ಪುರದಾಳ, ಸಿದ್ದು ಯಂಕಂಚಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

