ವಿಜಯಪುರ: ಜಿಲ್ಲೆಯಲ್ಲಿ ಬರುವ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳನ್ನು ಜನ-ಜಾನುವಾರುಗಳ ಕುಡಿಯುವ ನೀರಿನ ಸಲುವಾಗಿ ತುಂಬಿಸುತ್ತಿದ್ದು, ಕಾಲುವೆ ಕೊನೆಯವರೆಗೆ ನಿಗದಿತ ಪ್ರಮಾಣದಲ್ಲಿ ನೀರನ್ನು ಒದಗಿಸಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆ ಜಾಲದ ವ್ಯಾಪ್ತಿಯ ದಡದ ೧೦೦ ಅಡಿ ಪ್ರದೇಶವನ್ನು ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಮುಳವಾಡ ಏತ ನೀರಾವರಿ ಹಂತ-೨ರ ಪೂರ್ವ ಕಾಲುವೆ, ಪಶ್ಚಿಮ ಕಾಲುವೆಗಳ ಜಾಲದ ಅಡಿಯಲ್ಲಿ ಬರುವ ಬಿಜಾಪುರ ಮುಖ್ಯ ಕಾಲುವೆ, ಬಸವನಬಾಗೇವಾಡಿ ಶಾಖಾ ಕಾಲುವೆ ತಿಡಗುಂದಿ ಶಾಖಾ ಕಾಲುವೆ, ಹೂವಿನಹಿಪ್ಪರಗಿ ಶಾಖಾ ಕಾಲುವೆ, ಸಾಲವಾಡಗಿ ಶಾಖಾ ಕಾಲುವೆ, ಟಕ್ಕಳಕಿ ಶಾಖಾ ಕಾಲುವೆ, ದಿಂಡವಾರ ಶಾಖಾ ಕಾಲುವೆ ಹಾಗೂ ಅದರಡಿಯಲ್ಲಿ ಬರುವ ಉಪ ಕಾಲುವೆಗಳ ಮೂಲಕ ಜಿಲ್ಲೆಯಲ್ಲಿ ಬರುವ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳನ್ನು ಕಾಲುವೆ ಜಾಲಗಳ ಕೊನೆಯ ಭಾಗದವರೆಗೆ ನೀರು ತಲುಪಿಸಲು ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ ೧೦೦ ಅಡಿ ವ್ಯಾಪ್ತಿಯಲ್ಲಿ ಅಕ್ಟೋಬರ್ ೨೧ ರಿಂದ ನವೆಂಬರ್ ೧೨ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
Subscribe to Updates
Get the latest creative news from FooBar about art, design and business.
ಕಾಲುವೆ ಜಾಲ ವ್ಯಾಪ್ತಿಯ ದಡದ ೧೦೦ಅಡಿ ಪ್ರದೇಶದಲ್ಲಿ ನಿಷೇಧಾಜ್ಞೆ
Related Posts
Add A Comment

