ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಮುದ್ದೇಬಿಹಾಳ ಪ್ರೀಮಿಯರ್ ಲೀಗ್-೬ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅ೨೨ ರಂದು ಸಂಜೆ ೫:೩೦ ಕ್ಕೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಕ್ರೀಡಾಭಿಮಾನಿಗಳು ಭಾಗಿಯಾಗಿ ಪಂದ್ಯಾವಳಿಗಳನ್ನು ಯಶಸ್ವಿಗೊಳಿಸುವಂತೆ ಸಲಹಾ ಸಮಿತಿಯ ಸದಸ್ಯ ಮಹೆಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು, ಮೌಲಾನಾ ಅಲ್ಲಾಭಕ್ಷ ಖಾಜಿ ವಹಿಸಲಿದ್ದು, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಕಿ ಫೌಂಡೇಶನ ಅಧ್ಯಕ್ಷ ಸಿ.ಬಿ.ಅಸ್ಕಿ ಉದ್ಘಾಟನೆಗೊಳಿಸಲಿದ್ದು, ಯಾಸೀನ ಸೋಠೆ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಮಲ್ಲಿಕಾರ್ಜುನ ಮದರಿ, ಜಾವೇದ ಇನಾಮದಾರ, ಅಫ್ತಾಬ ಮನಿಯಾರ, ರಾಜು ಕರಡ್ಡಿ, ಪ್ರಭುರಾಜ ಕಲ್ಬುರ್ಗಿ, ಎಸ್.ಎಸ್.ಹುಲ್ಲೂರ, ಶಾಂತಗೌಡ ಪಾಟೀಲ ನಡಹಳ್ಳಿ, ಪ್ರತಿಭಾ ಅಂಗಡಗೇರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಸತೀಶ ಓಸ್ವಾಲ, ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ ಸೇರಿದಂತೆ ಮತ್ತೀತರರು ಆಗಮಿಸಲಿರುವದಾಗಿ ತಿಳಿಸಿದರು.
ಮತ್ತೋರ್ವ ಸದಸ್ಯ ಹುಸೇನ ಮುಲ್ಲಾ ಮಾತನಾಡಿ, ಪಂದ್ಯಾವಳಿಗಳಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನವಾಗಿ ೨ಲಕ್ಷ ರೂ ಗಳನ್ನು ಬಹುಮಾನವಾಗಿ ಅಸ್ಕಿ ಫೌಂಡೇಶನ್ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ ನೀಡಿದ್ದು, ಎರಡನೇ ವಿಜೇತ ತಂಡಕ್ಕೆ ೧ಲಕ್ಷ ರೂ ಗಳ ಬಹುಮಾನವನ್ನು ತಾಲೂಕು ಟೆಂಟ್ ಹೌಸ್ ಅಧ್ಯಕ್ಷ ಯಾಸೀನ ಸೋಠೆ ನೀಡಿದ್ದಾರೆ. ಬಿಜೆಪಿ ಧುರೀಣೆ ಕಾಶೀಬಾಯಿ ರಾಂಪೂರ ಲೈಟಿಂಗ್ ಸ್ಟಂಪ್ ಕೊಡುಗೆ ನೀಡಿ ಪ್ರೋತ್ಸಾಹಿಸಿದ್ದು ಎಲ್ಲ ಮಹನೀಯರಿಗೆ ಮತ್ತು ಸಂಸ್ಥಾಯ ಆಡಳಿತ ಮಂಡಳಿಗೆ ಕಮೀಟಿಯ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ಕಮೀಟಿಯ ಬಬಲು ಹುಣಚಗಿ, ಸದಾಶಿವ ಮಠ, ರಂಜಾನ ನದಾಫ್, ದಾವಲ ಗೊಳಸಂಗಿ, ಬಾಬರ ಶಹಾಪೂರ, ನಜೀರ ದಾಂಡಿಯಾ ಸೇರಿದಂತೆ ಮತ್ತಿತರರು ಇದ್ದರು.
Related Posts
Add A Comment