ಸಿಂದಗಿ: ನವರಾತ್ರಿ ಹಬ್ಬದ ಪ್ರಯುಕ್ತ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಸಿಂದಗಿ ಪಟ್ಟಣದ ಬಸವ ಮಂಟಪದಲ್ಲಿ ಅ.೨೨ ಭಾನುವಾರ ಸಂಜೆ ೫ ಗಂಟೆಗೆ ಪದ ಕೇಳೋಣರ‍್ರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಅ.೨೨ರಂದು ಸಾಯಂಕಾಲ ೫ಗಂಟೆಗೆ ಹಮ್ಮಿಕೊಳ್ಳುವ ಜಾನಪದ ಹಾಗೂ ಭಾವಗೀತೆಗಳ ಸಂಗೀತ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಲೇಖಕ ಪ್ರೊ.ಎಂ.ವಿ ಗಣಾಚಾರಿ, ತಳವಾರ ನೌಕರರ ಮಹಾಸಭಾ ತಾಲೂಕಾಧ್ಯಕ್ಷ ಭರತೇಶ ಹಿರೋಳ್ಳಿ, ಬೋರಗಿಯ ಜಾನಪದ ಗಾಯಕಿ ಇಮಾಂಬಿ ದೊಡಮನಿ ಭಾಗವಹಿಸಲಿದ್ದಾರೆ.
ಸಿಂದಗಿಯ ಎಂ.ಬಿ ಅಲ್ದಿ, ಕಣ್ಣಗುಡ್ಡಿಹಾಳದ ನಾನಾಗೌಡ ಪಾಟೀಲ, ಆಲಮೇಲದ ಐಶ್ವರ್ಯ ಕೊಳಾರಿ, ಕಕ್ಕಳಮೇಲಿಯ ಮಹಾದೇವ ಪತ್ತಾರ, ಬೋರಗಿಯ ಭೀಮರಾಯ ಬಡಗೇರ, ಕೊಗಟನೂರಿನ ಕಿರಣ ನಾವಿ ಕಲಾವಿದರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದೇ ವೇಳೆ ಬರಹಗಾರ ಬಸವರಾಜ ಬಡಗೇರ ಪರಿಷ್ಕರಣೆ ಮಾಡಿರುವ, ಗಂಗಾಧರ ವಿಶ್ವಕರ್ಮ ಹಾಡಿರುವ ಅಂಭಾ ಭವಾನಿ ಆಡಿಯೋ ಬಿಡುಗಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment