ಸಿಂದಗಿ: ತಾಲೂಕಿನ ಯರಗಲ್(ಬಿಕೆ) ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾಗಿ ಅಬ್ಬಾಸಲಿ ನ್ಯಾವನೂರ ಹಾಗೂ ಉಪಾಧ್ಯಕ್ಷರಾಗಿ ಶಂಕರಲಿಂಗ ಶಿವೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಸದಲಗಿ ತಿಳಿಸಿದರು.
ಅವಿರೋಧ ಆಯ್ಕೆಯಾಗುತ್ತಿದ್ದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗ್ರಾಮದ ಪ್ರಮುಖರು ಸನ್ಮಾನ ಮಾಡಿದರು.
ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಅಬ್ಬಾಸಲಿ ನ್ಯಾವನೂರ ಮಾತನಾಡಿ, ಸರ್ವ ಸದಸ್ಯರು ಹಾಗೂ ಪ್ರಗತಿಪರ ರೈತರು ಗ್ರಾಮದ ಹಿರಿಯರು ರಾಜಕೀಯ ದುರಿಣರು ಸೇರಿಕೊಂಡು ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಮೇಲೆ ಇಟ್ಟಂತಹ ಭರವಸೆ, ವಿಶ್ವಾಸವನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡು ಹೋಗಿ ಪಿಕೆಪಿಎಸ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ರೈತ ಪರ ಯೋಜನೆಗಳನ್ನು ತಂದು ರೈತರಿಗೆ ಅನುಕೂಲ ಮಾಡಿ ಜನಪರ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ನಿರ್ದೇಶಕರಾದ ಕವಿತಾ ಕಲಶೆಟ್ಟಿ, ವ್ಯವಸ್ಥಾಪಕ ರಮೇಶ ಬಿರಾದಾರ, ಗುರಲಿಂಗಪ್ಪಗೌಡ ಪಾಟೀಲ, ರಾಯಗೊಂಡಪ್ಪ ಗೌಡ ಬಿರಾದಾರ್. ಜಯಶ್ರೀ ದು ಮುಡ್ಡಿ. ಸಂತೋಷ ಯಂಕಂಚಿ. ಶೇಕಪ್ಪ ಹೇರ, ಮಡಿವಾಳಪ್ಪ ಕಡ್ಲಗೊಂಡ ಗೊಂಡ್, ಬಲಂತಪ್ಪ ಹೂಗಾರ್. ರಾಮಚಂದ್ರ ಸೊನ್ನದ. ಉಮರಲಿ ಮುಲ್ಲಾ. ಶಿವು ಬದ್ರಿ ಖಾದಿರ ಬಂಕಲಗಿ. ಹುಲಿಕಂಟರಾಯ ಹೇರ, ಅಲ್ಲು ಕಾಖಂಡಕಿ, ರಾಜಹ್ಮದ್ ಅಗಸಿ, ಶ್ರೀಶೈಲ್ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

