ಸಿಂದಗಿ: ಇಡೀ ರಾಜ್ಯಕ್ಕೆ ಆವರಿಸಿದ ಬರಗಾಲದ ಬವಣೆಯನ್ನು ಅಧ್ಯಯನವನ್ನು ಮಾಡುವುದಾಗಲಿ, ಬರಗಾಲವನ್ನು ನೀಗಿಸುವಂತಹ ಯಾವುದೇ ರೀತಿಯ ಕಾರ್ಯಕ್ರಮವನ್ನು ಹಾಕಿಕೊಳ್ಳದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗುವಂತದ್ದಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ ಹೇಳಿದರು.
ಪಟ್ಟಣದಲ್ಲಿ ಬುಧುವಾರದಂದು ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಬರಗಾಲದ ಬವಣೆಯ ಛಾಯೆಯೇ ಮೂಡುತ್ತದೆ. ಪಂಚ ರಾಜ್ಯ ಚುನಾವಣೆಯ ಸಲುವಾಗಿ ಈ ಕಾಂಗ್ರೆಸ್ ಸರಕಾರ ಎಟಿಎಂ ಸರಕಾರವಾಗಿದೆ. ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಸಪರ್ಕವಾಗಿ ವಿದ್ಯುತ್‌ನ್ನು ನೀಡುತ್ತಿರುವುದು ಖಂಡಿಸಬೇಕಾಗಿದೆ. ಜನರಿಗೆ ಉಚಿತ ವಿದ್ಯುತ್ ಎಂದು ಹೇಳಿ ರಾಜ್ಯವನ್ನು ಕತ್ತಲಲ್ಲಿ ಕೆಡವಿದೆ. ಕನಿಷ್ಠ ೫ಗಂಟೆ ರೈತರಿಗೆ ಕರೆಂಟ್ ನೀಡುತ್ತಿಲ್ಲ. ಕೂಡಲೇ ಸರಕಾರ ಎಚ್ಚೇತ್ತುಕೊಳ್ಳದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ ಮಾತನಾಡಿ, ರೈತರಿಗೆ ೭ಗಂಟೆ ವಿದ್ಯುತ್ ನೀಡದೇ ಇದ್ದ ಪಕ್ಷದಲ್ಲಿ ಸ್ಥಳೀಯ ಶಾಸಕರ ಮನೆ ಎದುರು ಹಾಗೂ ಹೆಸ್ಕಾಂ ಕಾರ್ಯಾಲಯದ ಮುಂಭಾಗದಲ್ಲಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಜೆಡಿಎಸ್ ಸದಸ್ಯೆ ರಾಜಣ್ಣ ನಾರಾಯಣಕರ ಮಾತನಾಡಿದರು.
ಪ್ರಟಿಭಟನಾಕಾರರು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮಹಿಳಾ ಮೋರ್ಚಾಧ್ಯಕ್ಷೆ ಶಿಲ್ಪಾ ಕುದರಕೊಂಡ, ಬಸವರಾಜ ಹುಗಾರ, ರಾಜಶೇಖರ ಪೂಜಾರಿ, ಗುರು ಹುಲ್ಲೂರ, ಶ್ರೀಮಂತ ನಾಗೂರ, ಸಿದ್ದು ಪೂಜಾರಿ, ಪ್ರಕಾಶ ಶೇರಖಾನೆ, ಖಾಜೂ ಬಂಕಲಗಿ, ಚಂದ್ರಶೇಖರ ಅಮಲಿಹಾಳ, ತಾಲೂಕಾಧ್ಯಕ್ಷೆ ನೀಲಮ್ಮ ಯಡ್ರಾಮಿ, ಶ್ಯಾಮಲಾ ಮಂದೇವಾಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.