ಕೊಲ್ಹಾರ: ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬರಗಾಲದಂತಹ ಭೀಕರ ಪರಿಸ್ಥಿತಿ ಇರುವಾಗ ಸಚಿವ ಶಿವಾನಂದ ಪಾಟೀಲರು ಹೈದರಾಬಾದನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನೋಟಿನ ಕಂತೆಯನ್ನು ತಮ್ಮ ಕಾಲಡಿಯಲ್ಲಿ ತುಳಿದುಕೊಂಡು ಹಾಗೂ ನೋಟನ್ನು ಹಾರಿಸುವ ದೃಶ್ಯ ನೋಡಿಕೊಂಡು ಸುಮ್ಮನೆ ಇರುವುದು ಮತದಾರರಿಗೆ ಮತ್ತು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆರೋಪಿಸಿದರು.
ಈ ಕುರಿತು ಪಟ್ಟಣದ ಅಗಶಿಯ ಹತ್ತಿರ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಮುಂದಾಳತ್ವವನ್ನು ವಹಿಸಿ ನಡೆದ ಪ್ರತಿಭಟನೆಯ ನಂತರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳನ್ನು ಲಕ್ಷ್ಮಿ ಸ್ವರೂಪದಲ್ಲಿ ಕಾಣುವುದು ಸಂಪ್ರದಾಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಕಣ್ಣ ಮುಂದೆಯೇ ಇಂಥ ಪ್ರಸಂಗ ನಡೆದರೂ ಸಂಪ್ರದಾಯ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎನ್ನುವದನ್ನು ಮರೆತು ಅಹಂಕಾರದ ಪರಮಾವಧಿಯನ್ನು ಪ್ರದರ್ಶನ ಮಾಡಿದಂತಾಗಿದ್ದು, ಮುಖ್ಯಮಂತ್ರಿಗಳು ತಕ್ಷಣವೇ ಸಚಿವ ಶಿವಾನಂದ ಪಾಟೀಲರ ರಾಜಿನಾಮೆಯನ್ನು ಪಡೆದುಕೊಳ್ಳಬೇಕು. ಇಲ್ಲವಾದರೆ ಸಚಿವರೇ ನೈತಿಕ ಹೊಣೆಯಿಂದ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಗಣಕುಮಾರ, ಪಟ್ಟಣ ಪಂಚಾಯತಿ ಸದಸ್ಯರಾದ ಬಾಬು ಭಜಂತ್ರಿ, ಅಪ್ಪಶಿ ಮಟ್ಯಾಳ, ಶ್ರೀಶೈಲ ಅಥಣಿ, ರೋಣಿಹಾಳ ಗ್ರಾಮ ಪಂಚಾಯತಿಯ ಸದಸ್ಯೆ ಶ್ರೀಮತಿ ಬೀಳಗಿ, ಸದಾಶಿವ ಗಣಿ, ಇಸ್ಮಾಯಿಲಸಾಬ ತಹಶೀಲ್ದಾರ, ಪೀರಮಹ್ಮದ ಗಿರಗಾಂವಿ, ಶೇಖಪ್ಪ ಗಾಣಿಗೇರ, ಕುಮಾರಗೌಡ ಪಾಟೀಲ, ಶಿವಾನಂದ ಪತಂಗಿ, ರಮೇಶ ಮಮದಾಪೂರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸಚಿವ ಶಿವಾನಂದ ಪಾಟೀಲ ನೋಟಿನ ಕಂತೆ ತುಳಿದದ್ದು ಸಂಪ್ರದಾಯ ವಿರೋಧ :ಬೆಳ್ಳುಬ್ಬಿ
Related Posts
Add A Comment

