ಆಲಮಟ್ಟಿ: ಚಿಮ್ಮಲಗಿ ಪಶ್ಚಿಮ ಕಾಲುವೆಗೆ ಸರಿಯಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ನಿಡಗುಂದಿ, ಗೋನಾಳ ಹಾಗೂ ಕಿರಿಶ್ಯಾಳ ಗ್ರಾಮದ ರೈತರು ಕೆಬಿಜೆನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಚಿಮ್ಮಲಗಿ ಪಶ್ಚಿಮ ವಿತರಣಾ ಕಾಲುವೆ ೩೬ನೇ ಕಿಮೀದಿಂದ ೫೨ನೇ ಕಿಮೀದವರೆಗೆ ಸರಿಯಾಗಿ ನೀರು ಹರಿದು ಬರುತ್ತಿಲ್ಲ. ಚಿಮ್ಮಲಗಿ ಪಶ್ಚಿಮ ಕಾಲುವೆಯನ್ನೇ ನಂಬಿ ಬೆಳೆ ಬೆಳೆದ ಸಾವಿರಾರು ರೈತರು ಸಂಕಷ್ಟ ಎದುರಿಸುವಂತಾಗಿದೆ. ಸದ್ಯ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಮಾನವೀಯ ನೆಲೆಗಟ್ಟಿನ ಮೇಲೆ ಅರ್ಥೈಸಿಕೊಂಡು ಸಮರ್ಪಕವಾಗಿ ಕಾಲುವೆಯ ಕೊನೆಯಂಚಿನವರೆಗೆ ನೀರು ಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡ ಗಂಗಾಧರ ವಾರದ, ಶಿವಪ್ಪ ಕೋತಿನ, ಹಣಮಂತ ಗುಂಡಿನಮನಿ, ಪರಶು ವಡವಡಗಿ, ನಿಂಗಪ್ಪ ಇಂಜಗನೇರಿ, ಎಂ.ಎಸ್.ನಿಡಗುಂದಿ, ದ್ಯಾಮಣ್ಣ ಹುಗ್ಗಿ, ಗುರಪ್ಪ ಹುಗ್ಗಿ, ಕೆ.ಎಚ್.ಹುಗ್ಗಿ, ಮುತ್ತಪ್ಪ ಗುಣಕಿ, ಎಂ.ಡಿ.ತಳೇವಾಡ, ಡಿ.ಎ.ಗುಣಕಿ ಇತರರಿದ್ದರು.
Related Posts
Add A Comment