ಛಾಯಾಗ್ರಾಹಕರಿಗೆ ಆದಾಯ ತೆರಿಗೆ ಮತ್ತು ಜಿಎಸ್ಟಿ ಕುರಿತು ವಿಶೇಷ ಕಾರ್ಯಾಗಾರದಲ್ಲಿ ಚಾರ್ಟರ್ಡ್ ಅಕೌಂಟಂಟ್ ಶಾಂತವಿರೇಶ ಮಣೂರ ಉಪನ್ಯಾಸ
ವಿಜಯಪುರ: ದೇಶ ಮುಂದುವರಿಯಲು ಪ್ರತಿಯೊಬ್ಬರೂ ತಮ್ಮ ಆದಾಯಕ್ಕೆ ತಕ್ಕಂತೆ ಸರಕಾರಕ್ಕೆ ತೆರಿಗೆ ಸಲ್ಲಿಸುವುದು ಅಗತ್ಯ. ಆದರೆ ಛಾಯಾಗ್ರಾಹಕರಿಗಿರುವ ಸೇವಾ ತೆರಿಗೆ ಶೇ.18 ಅವರಿಗೆ ಹೊರೆಯಾಗಿದ್ದು, ಸರಕಾರ ಅದನ್ನು ಶೇ. 5 ರ ವ್ಯಾಪ್ತಿಗೆ ತರಬೇಕು. ಅದಕ್ಕಾಗಿ ಛಾಯಾಗ್ರಾಹಕರು ಸಂಘಟನೆ ಮೂಲಕ ಸರಕಾರಕ್ಕೆ ಮನವಿ ಮಾಡುವಂತೆ ಯುವ ಭಾರತ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ ಕಾರಜೋಳ ಸಲಹೆ ನೀಡಿದರು.
ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಗುರುವಾರ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಯುವ ಭಾರತ ಸಮಿತಿ, ವಿಜಯಪುರ ಇವರ ಸಹಯೋಗದಲ್ಲಿ ಛಾಯಾಗ್ರಾಹಕರಿಗೆ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ವಿಶೇಷ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಪುರದ ಜಾರಿ ಸರಕುಗಳು ಮತ್ತು ಸೇವಾ ತೆರಿಗೆ ಇಲಾಖೆಯ ಸಿ.ಟಿ.ಓ. ಸುರೇಶ.ಎಂ.ಗೊಳಸಂಗಿ ಮಾತನಾಡಿ, ಯಾವುದೇ ವ್ಯವಹಾರದಲ್ಲಿ ಕಷ್ಟಕ್ಕೆ ಎದೆಗುಂದದೇ ಮುಂದೆ ಸಾಗಿದಾಗ ಮಾತ್ರ ಉಜ್ವಲ ಭವಿಷ್ಯ ಸಾಧ್ಯ. ಗುರಿ ಸುಪ್ತವಾಗಿದ್ದು ಸಾಧನೆ ಸತತವಾಗಿರಬೇಕು. ವ್ಯವಹಾರದ ಮಾರಾಟ ಮತ್ತು ಖರೀಧಿಗೆ ಸಂಬಂಧಿಸಿದ ವಿವರಗಳು ಪಾರದರ್ಶಕವಾಗಿ ಪ್ರತಿ ತಿಂಗಳು ನಮ್ಮ ಇಲಾಖೆಗೆ ರಿಟರ್ನ್ ಫೈಲ್ ಮಾಡಿದರೆ ಯಾವ ಸಮಸ್ಯೆಗಳೂ ಇರೊಲ್ಲ ಎಂದರು.
ವಿಜಯಪುರದ ಲೆಕ್ಕ ಪರಿಶೋಧಕ (ಸಿಎ) ಶಾಂತವಿರೇಶ ಮಣೂರ ಮಾತನಾಡಿ, ಛಾಯಾಗ್ರಾಹಕರ ವ್ಯವಹಾರಕ್ಕೆ ಸಂಬಂಧಿಸಿದ ತೆರಿಗೆಗಳು ಕುರಿತು ಸಮಗ್ರ ಮಾಹಿತಿ ನೀಡಿದರಲ್ಲದೆ, ವ್ರವಹಾರದ ಲೆಕ್ಕಪತ್ರಗಳ ದಾಖಲೆಗಳನ್ನು ಆರು ವರ್ಷಗಳವರೆಗೆ ಕಾಯ್ದಿರಿಸಿಡಬೇಕೆಂದು ಸಲಹೆ ನೀಡಿದರು.
ಜಿಎಸ್‌ಟಿಪಿ ಸರಕುಗಳು ಮತ್ತು ಸೇವಾ ತೆರಿಗೆ ಸಲಹೆಗಾರ ಸಿದ್ದನಗೌಡ ಬಿರಾದಾರ, ಲೆಕ್ಕಪತ್ರ ಮತ್ತು ಜಿ.ಎಸ್.ಟಿ. ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಛಾಯಾಗ್ರಾಹಕರಿಗೆ ಜಿಎಸ್ಟಿ, ಆದಾಯ ತೆರಿಗೆ ಕುರಿತ ಮಾಹಿತಿ ನೀಗಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಸಂಘದ ಸದಸ್ಯರಿಗೆ ಸಹಾಯವಾಗಲೆಂದು, ಸಂಘದ ವತಿಯಿಂದ ತೆರಿಗೆ ಸಲಹೆಗಾರ ನೇಮಕದ ಆಲೋಚನೆ ಹೊಂದಿರುವುದಾಗಿ ಹೇಳಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸತೀಶ ಕಲಾಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಂಡಿ ತಾಲೂಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಲ್ಲಪ್ಪ ಕುದರೆ, ಬಬಲೇಶ್ವರ ತಾಲೂಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಂಗಲಿಬಾಷಾ ಮುಜಾವರ, ಮತ್ತು ಮೌನೇಶ ಬಡಿಗೇರ, ಕೋಲ್ಹಾರ ತಾಲೂಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಂಗಯ್ಯ ಮಠಪತಿ, ಹಾಗೂ ಪಡೆಪ್ಪಾ ಕೋಲಕಾರ, ಯುವ ಭಾರತ ಸಮಿತಿಯ ಪದಾಧಿಕಾರಿಗಳಾದ ವಿನೋದಕುಮಾರ ಮಣೂರ, ವಿರೇಶ ಗೊಬ್ಬುರ, ಕಲ್ಮೇಶ ಅಮರಾವತಿ, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ, ಖಜಾಂಚಿ ಸುರೇಶ ರಾಠೋಡ, ನಿರ್ದೇಶಕರಾದ ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ ಸದಸ್ಯರಾದ ಅನಂತ ಭೋಸಲೆ, ಪ್ರಮೋದ ಕಾಜಗಾರ, ಕಿಶೋರ ಖಂಡಾಗಳೆ, ಸುಗುರೇಶ ಗಲ್ಪಿ, ಕೇಶವ ರಾಠೋಡ, ಬಸವರಾಜ ಸರ್ಜಾಪೂರ, ಶಶಿ ಕುಂಬಾರ, ಪ್ರಮೋದ ಪಾಟೀಲ, ಅಶೋಕ ಸಾರವಾಡ, ಗೀರಿಶ ಚೌಕಿಮಠ. ಸಹಿತ ಜಿಲ್ಲೆಯ ಛಾಯಾಗ್ರಾಹಕರು ಉಪಸ್ಥಿತರಿದ್ದರು.