ವಿಜಯಪುರ: ವಿಶ್ವ ಅಂಗರಚನಾ ಶಾಸ್ತ್ರ ದಿನ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಅಂಗರಚನಾ ಶಾಸ್ತ್ರ ವಿಭಾಗದಿಂದ ನಗರದ ಐದು ಕಡೆಗಳಲ್ಲಿ ಬೀದಿ ನಾಟಕದ ಪ್ರದರ್ಶನ ಮಾಡಲಾಯಿತು.
ಬುಧವಾರ ನಗರದ ಬಿ.ಎಲ್.ಡಿ. ಅಸ್ಪತ್ರೆ ಎದುರಿಗೆ, ಶ್ರೀ ಸಿದ್ದೇಶ್ವರ ದೇವಸ್ಥಾನ, ಗಾಂಧಿಚೌಕ, ರೈಲು ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂ.ಬಿ.ಬಿ.ಎಸ್ ಪ್ರಥಮ ವರ್ಷದ 75 ವಿದ್ಯಾರ್ಥಿಗಳು ಬೀದಿ ನಾಟಕದ ಪ್ರದರ್ಶಿಸಿದರು. ದೇಹದಾನದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನರೇಶ ಪೊದ್ದಾರ ಮತ್ತು ಗೋರಖ ಭಾವಸಾರ ರಚಿಸಿ ನಿರ್ದೇಶಿಸಿರುವ ಈ ಬೀದಿ ನಾಟಕ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪ್ರದರ್ಶನ ಮಾಡಲಾಯಿತು.
ಈ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಐದು ಜನ ದೇಹದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಮತ್ತೆ ಹಲವರು ದೇಹದಾನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಂಗರಚನಾ ಶಾಸ್ತ್ರದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ, ಪ್ರeಧ್ಯಾಪಕರಾದ ಡಾ. ಎಸ್. ವಿ. ಯಾತಗಿರಿ, ಡಾ. ಅಶ್ವಿನಿ ನುಚ್ಚಿ, ಡಾ. ವೀಣಾ ಹರವಾಳಕರ, ಡಾ. ಐ. ಬಿ. ಬಾಗೋಜಿ, ಡಾ. ಎಂ. ಕೆ. ಖುರೆಶೀ, ಡಾ. ನಂದೇಶ ಕಡಕೊಳ, ಪ್ರಯೋಗಲಾಯದ ತಂತ್ರಜ್ಞರಾದ ಆರ. ಪಿ. ಮೆಳ್ಳಿ, ಬಿ. ಎಸ್. ಕಟ್ಟಿಮನಿ, ಅಜೀತ ಉಪದ್ಯಾಯ, ಆರ್. ಬಿ. ಪಡಗಾನೂರ, ಮಹಾವಿದ್ಯಾಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

