ವಿಜಯಪುರ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪೋಷಕರು ಮಕ್ಕಳನ್ನು ಒಳ್ಳೆಯ ಸಂಸ್ಕಾರಯುತ ವಾತಾವರಣದಲ್ಲಿ ಬೆಳೆಸಬೇಕು. ಮಕ್ಕಳು ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ ಅವರ ಬದುಕಿಗೆ ಮುನ್ನುಡಿಯಾಗುತ್ತದೆ ಎಂದು ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷರಾದ ಡಾ ಸಂಗಮೇಶ ಮೇತ್ರಿ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಂತೋಷ ಬಂಡೆ ಅವರ ಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರ 5ನೇ ವರ್ಷದ ಜನ್ಮದಿನದ ನಿಮಿತ್ತ ‘ಮೂಲ’-ಕಥಾ ಸಂಕಲನದ ಲೋಕಾರ್ಪಣೆ, ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ, ವಿಶ್ವ ಕೈತೊಳೆಯುವ ದಿನ ಹಾಗೂ ಒಂದು ನೂರು ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮೂಲ’ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ನಾದ ಕೆ ಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಿದಂಬರ ಬಂಡಗರ, ಒಳ್ಳೆಯ ಪುಸ್ತಕಗಳು ನಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು ಎಂದು ಹೇಳುತ್ತಾ, ಎಪಿಜೆ ಅಬ್ದುಲ್ ಕಲಾಂ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ. ಅವರು ದೇಶದ ಯುವಕರಿಗೆ ಉತ್ತಮ ಪಾಠಗಳನ್ನು ನೀಡಿ ಆದರ್ಶಪ್ರಾಯರಾಗಿದ್ದಾರೆ
ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಶಿಕ್ಷಕ ಸಂಗಮೇಶ ಬಂಡೆ ಸ್ವಾಗತಿಸಿ, ಪರಿಚಯಿಸಿದರು. ಕರುನಾಡು ಪ್ರಭ ಪತ್ರಿಕೆಯ ಸಂಪಾದಕ ಶರಣು ಮಸಳಿ, ಇಂಡಿ ಪಟ್ಟಣದ ಸಮಾಜ ಸೇವಕ ಹಸನ ಮುಜಾವರ, ಬಂಡೆ ಕುಟುಂಬದ ಈರಣ್ಣ, ಶ್ರೀಧರ, ಭುವನೇಶ್ವರಿ, ಸವಿತಾ, ಸುರೇಖಾ, ಸುಹಾಸಿನಿ, ಗಾಯಿತ್ರಿ ಸೇರಿದಂತೆ ಗ್ರಾಮಸ್ಥರು,ಗೆಳೆಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಸಿಗಳನ್ನು ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

