ಚಡಚಣ: ರಾಜ್ಯದ ಕಟ್ಟ ಕಡೆಯ ಹಳ್ಳಿ, ಹಾಲುಮತ ಸಮಾಜದವರ ಕಾಶಿ, ಹಾಲುಮತ ಸಮಾಜ ಬಾಂಧವರ ಆರಾಧ್ಯ ದೈವ ಬೀರಲಿಂಗೇಶ್ವರ ದೇವಾಲಯವು ಬೀರಲಿಂಗೇಶ್ವರನು ಐಕ್ಯವಾದ ಸ್ಥಳವಾಗಿರುವುದರಿಂದ ಸಹಸ್ರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಧಾರ್ಮಿಕ ಕ್ಷೇತ್ರ ಎಂದು ಐತಿಹ್ಯವಿದೆ. ಸುಂದರ ಪರಿಸರದ ನಡುವೆ ಈ ಕ್ಷೇತ್ರವಿದ್ದು, ಪ್ರತಿನಿತ್ಯ ಸ್ಥಳೀಯರಲ್ಲದೆ, ರಾಜ್ಯ, ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದಕ್ಕಾಗಿ ಯಾತ್ರಿ ನಿವಾಸವು ಈ ಕ್ಷೇತ್ರಕ್ಕೆ ಅವಶ್ಯಕತೆ ಇದೆ ಎಂದು ಶಾಸಕರಾದ ವಿಠ್ಠಲ ಕಟಕದೊಂಡರವರು ಹೇಳಿದರು.
ಸೋಮವಾರದಂದು ಶಿರಾಡೋಣ ಗ್ರಾಮದ ಬೀರಲಿಂಗೇಶ್ವರ ದೇವಾಸ್ಥಾದ ಆವರಣದಲ್ಲಿ ಯಾತ್ರಿ ನಿವಾಸಕ್ಕೆ ಭೂಮಿಪೂಜೆಯ ನೇರವೇರಿಸಿ ಮಾತನಾಡಿದ ಅವರು. ರೈತರಿಗೆ ಶಕ್ತಿ ತುಂಬಲು ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ನೀರು ಹರಿಸಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹೆಮ್ಮೆಯ ಸೈಕರಿಗೆ ಗೌರವಿಸುವ ಮೂಲಕ ದೇಶಪ್ರೇಮ ಮೆರೆದರು.
ಈ ವೇಳೆಯಲ್ಲಿ ಬೀರಲಿಂಗೇಶ್ವರ ಪೂಜಾರಿಯವರಾದ ಬೀರಪ್ಪ ಮಹಾರಾಯರು, ಯಶವಂತ ಮಾಡಕರೆ, ಬೀಮುಸಾಹುಕಾರ ಬಿರಾದಾರ, ಪ್ರಕಾಶಗೌಡ ಪಾಟೀಲ, ಬಸುಸಾಹುಕಾರ ಬಿರಾದಾರ, ಮಹಾದೇವ ಹಿರೇಕುರುಬರ, ಅಂಬಾದಾಸ ಕುಲಕರ್ಣಿ, ಗಿರಿಮಲ್ಲ ಬೆಳ್ಳುಂಡಗಿ, ನಾಗನಾಥ ಕಾಟೆ, ಸುಬಾಸ ಬಗಲಿ, ಸಂಜು ದೈಗೊಂಡೆ, ವಿಜಯಕುಮಾರ ಬೀರುಣಗಿ, ರೇವಣಸಿದ್ಧ ಹಬಗೊಂಡೆ, ರಾಜಕುಮಾರ ಖರಾತ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾಸ್ತವಿಕ ನುಡಿ ಆರ್.ಎಂ.ಚೋಪಡೆ, ಸ್ವಾಗತ ಬಿ.ಎಂ.ಹಬಗೊಂಡೆ, ನಿರೂಪಣೆ ಎಸ್.ಪಿ. ಬಿರಾದಾರ, ವಂದನಾರ್ಪಣೆಯನ್ನು ಎಂ.ಎಲ್.ಪಾಂಡ್ರೆ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

