ದೇವರಹಿಪ್ಪರಗಿ: ನೂತನ ನಿರ್ದೇಶಕ ಮಂಡಳಿಯ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇನ್ನೂ ಹೆಚ್ಚೆಚ್ಚು ಜನಪರ ಕಾರ್ಯ ಮಾಡುವಂತಾಗಲಿ ಎಂದು ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ ಹೇಳಿದರು.
ನಗರದಲ್ಲಿ ಇತ್ತೀಚಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ), ಗುರುಶಾಂತ ನಿಡೋಣಿ, ರಾಜಶೇಖರ ಗುಡದಿನ್ನಿ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಬಿ.ಎಸ್.ಪಾಟೀಲ(ಯಾಳಗಿ), ಸುರೇಶಗೌಡ ಬಿರಾದಾರ, ಅರವಿಂದ ಪೂಜಾರಿ, ಚಂದ್ರಶೇಖರ ಪಾಟೀಲ ಅವರನ್ನು ದೇವರಹಿಪ್ಪರಗಿ ತಾಲ್ಲೂಕು ಬಣಜಿಗ ಸಂಘದ ಅಡಿಯಲ್ಲಿ ಸನ್ಮಾನಿಸಿ, ಮಾತನಾಡಿದರು.
ತಾಲ್ಲೂಕು ಬಣಜಿಗ ಸಂಘದ ಉಪಾಧ್ಯಕ್ಷ ಜಿ.ಎಸ್.ಕೋರಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಬಲೇಶ್ವರ, ವಿನುತ ಕೋರಿ ಇದ್ದರು.
Related Posts
Add A Comment