ಬ್ರಹ್ಮದೇವನಮಡು: ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದ್ದು, ಅಭಿವೃದ್ದಿ ಪರ ಯೋಜನೆಗಳು ಹೆಚ್ಚಿಸಿವೆ ಎಂದು ಸಿಂದಗಿ ತಾಲೂಕು ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.
ಸಿಂದಗಿ ತಾಲೂಕು ಗೋಲಗೇರಿ ವಲಯದ ಯಂಕಂಚಿ ಕಾಯ೯ಕ್ಷೇತ್ರದಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನೂತನ ಸಿಎಸ್ ಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲ ವಿತರಣೆ, ಲಾಭಾಂಶಗಳ ಸಂಗ್ರಹದ ಮೂಲಕ ಆಥಿ೯ಕ ಅಭ್ಶುದಯಕ್ಕೆ ಸಂಘದ ಸದಸ್ಶರು ಬದ್ದರಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ, ಕೆರೆ ಹೂಳೆತ್ತುವದು, ನಿಗ೯ತಿಕರಿಗೆ ಮಾಶಾಸನ, ವಾತ್ಸಲ್ಶ ಕಿಟ್ಟ್, ದೆವಸ್ಥಾನ ಕಟ್ಟಡಗಳ ಸಹಾಯಧನ, ಸಂಘದ ಸದಸ್ಶರ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಶವೇತನ ನೀಡಲಾಗುತ್ತಿದೆ. ಸಿ.ಎಸ್.ಸಿ.ಕೇಂದ್ರದಲ್ಲಿ ಸಿಗುವ ಕೇಂದ್ರ ಹಾಗೂ ರಾಜ್ಶ ಸಕಾ೯ರದ ಈ ಸೌಲಭ್ಶಗಳ ಬಗ್ಗೆ ಮಾಹಿತಿ ನೀಡಿದರು. ಈ. ಮೇಲ್ವಿಚಾರಕ ಮಂಜುನಾಥ ಸಜ್ಜನ, ಸೇವಾ ಪ್ರತಿನಿಧಿಗಳಾದ ರೂಪಾ ಕುಲಕಣಿ೯,ರೇಖಾ ಹಳ್ಳಿ, ಒಕ್ಕೂಟದ ಅಧಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಶ ಸುರೇಶ ಕಿರಣಗಿ ಸೇರಿದಂತೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

