ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ್ ಅವರಿಗೆ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಪಟ್ಟಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹೇಳಿದರು.
ಸಮಸ್ಯೆಗಳು ಕೇಳಲು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಬೇಕು ಮತ್ತು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳೆಲ್ಲವೂ ಆಲಿಸಿದ್ದೇನೆ, ಎಲ್ಲವೂ ಸುಸೂತ್ರ ವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸುತಿದ್ದಾರೆ.
ಯಾವ ಕೊಳಚೆ ಪ್ರದೇಶಗಳಿಗೂ ಬೇಟಿ ಕೊಟ್ಟು ವಾಸ್ತವ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಲಭ್ಯವಿರುವುದಿಲ್ಲ. ನಾನು ಕೂಡ ಎಸ್ಸಿನೇ ಇದ್ದೇನೆ. ನನಗೆ ಯಾರು ಏನನ್ನು ಮಾಡಿಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಾರೆ. ಆದುದರಿಂದ, ಸೇವಾ ಅಧಿನಿಯಮದನ್ವಯ ನೋಟಿಸ್ ಜಾರಿಗೊಳಿಸಿ, ಕೊಳಗೇರಿ ಜನರ ಕನಿಷ್ಠ ಬದುಕುವ ಹಕ್ಕುಗಳನ್ನು ರಕ್ಷಿಸಲು ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಿದರು.
ಪದಾಧಿಕಾರಿಗಳಾದ ಅಮೃತ್, ಪರಶುರಾಮ್, ಪ್ರಶಾಂತ್, ರಮೇಶ್, ಮೇಹಬೂಬ್, ಆದಿತ್ಯ ಹಳ್ಳಿ, ಉಮೇಶ್, ಚನ್ನು, ಸಾಗರ್, ಸುಭಾಶ್ಚಂದ್ರ, ತೋಫೀಕ್, ಇಮ್ರಾನ್ ಇತರರಿದ್ದರು.

