ವಿಜಯಪುರ ಜಿಲ್ಲೆಯಲ್ಲಿ ಎರಡು ಹಂತದ ಜನಗಣತಿಗೆ ಬ್ಲಾಕ್ ರಚನೆ ಜಿಲ್ಲೆ, ತಾಲೂಕು, ಪಾಲಿಕೆ ಮಟ್ಟದಲ್ಲಿ ಅಧಿಕಾರಿಗಳ ನೇಮಕ | ನಮ್ಮ ಜನಗಣತಿ, ನಮ್ಮ ಭವಿಷ್ಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯ ವಾಕ್ಯದಡಿ ಭಾರತ ಜನಗಣತಿ-೨೦೨೭ರ ಮೊದಲ ಹಂತದ ಜನಗಣತಿಯನ್ನು ಏಪ್ರಿಲ್ ನಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಮೊದಲ ಹಂತ -೧ ಮನೆಪಟ್ಟಿ ಮತ್ತು ಮನೆ ಗಣತಿ (ಎಚ್‌ಎಲ್‌ಒ) ಏಪ್ರಿಲ್ ೧ರಿಂದ ೧೫ರವರೆಗೆ ಇದೇ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸ್ವಯಂ ಗಣತಿ ಐಚ್ಛಿಕವಾಗಿರುತ್ತದೆ. ಕುಟುಂಬಗಳು ಮಾತ್ರ ಸ್ವಯಂ ಗಣತಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಈ ಹಂತದಲ್ಲಿ ನಿಮ್ಮ ಮೊಬೈಲ್ ಮತ್ತು ಡೆಸ್ಕ್ ಟಾಪ್ ಮೂಲಕ ಲಾಗಿನ್ ಆಗಬೇಕು. ಲಾಗಿನ್ ನಲ್ಲಿ ಕಾಣಿಸುವ ೩೩ ಸರಳ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನು ಅಪ್ ಡೇಟ್ ಮಾಡಿದ ನಂತರ ಎಸ್‌ಇ ಐಡಿ ಸೃಜನೆಯಾಗುತ್ತಿದ್ದಂತೆಯೇ ಅದನ್ನು ಸೇವ್ ಮಾಡಬೇಕು. ಬಳಿಕ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಅವರಿಗೆ ನೀಡಬೇಕು. ಸ್ವಯಂ ಗಣತಿ ಪೂರ್ಣ ಪ್ರಮಾಣದ ಜನಗಣತಿಯಾಗುವುದಿಲ್ಲ. ಎಸ್‌ಇ ಐಡಿ ಯನ್ನು ಗಣತಿದಾರರಿಗೆ ನೀಡಿದಾಗ ಅವರು ಕಟ್ಟಡ ಸಂಖ್ಯೆ, ಜನಗಣತಿ ಮನೆ ಸಂಖ್ಯೆ ಮತ್ತಿತರ ಹೆಚ್ಚುವರಿ ವಿವರಗಳನ್ನು ಸೇರಿಸಿ ಡೇಟಾ ಅಪ್‌ಲೋಡ್ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಫಾರ್ಮ್ ಭರ್ತಿ ಮಾಡಲು ಪೋರ್ಟಲ್ ನಲ್ಲಿ ಟೂಲ್ ಟಿಪ್ಸ್ ಸೌಲಭ್ಯವಿದೆ. ನಿಮ್ಮ ಮನೆಯ ಸ್ಥಳವನ್ನು ಮ್ಯಾಪ್ ನಲ್ಲಿ ಪಿನ್ ಕೋಡ್ ಮತ್ತು ಲ್ಯಾಂಡ್ ಮಾರ್ಕ್ ಬಳಸಿ ನಿಖರವಾಗಿ ಗುರುತಿಸಬಹುದಾಗಿದೆ.
ಮನೆ ಪಟ್ಟಿ ಕ್ಷೇತ್ರ ಕಾರ್ಯ
ಏ. ೧೬ರಿಂದ ಮೇ ೧೫ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುವುದು. ಫೆ. ೨೦೨೭ರಿಂದ ಜನಸಂಖ್ಯಾ ಗಣತಿ ೨ನೇ ಹಂತದ ಜನಗಣತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜನಗಣತಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಲ್ಲ ಚಾರ್ಜ್ ಅಧಿಕಾರಿಗಳಿಗೆ ಮತ್ತು ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಆಯಾ ಚಾರ್ಜ್ ಹಂತಗಳಲ್ಲಿ ಏಪ್ರಿಲ್ ೨೦೨೬ ಮೊದಲ ವಾರದಲ್ಲಿ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ರಚನೆ: ಜನಗಣತಿಗೆ ಬ್ಲಾಕ್‌ಗಳನ್ನು ರಚಿಸಲಾಗುತ್ತಿದ್ದು, ೧೫೦ ರಿಂದ ೨೦೦ ಮನೆಗಳು ಅಥವಾ ೭೦೦ ರಿಂದ ೮೦೦ ಜನಸಂಖ್ಯೆಗೆ ಒಬ್ಬರು ಗಣತಿದಾರರನ್ನು ಮತ್ತು ಪ್ರತಿ ೬ ಜನ ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗುವುದು ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ೨೯೧೯ ಮತ್ತು ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶದಲ್ಲಿ ೫೯೮ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ೫೮೬ ಒಟ್ಟರೆ ಜಿಲ್ಲೆಯಲ್ಲಿ ೪೧೦೩ ಬ್ಲಾಕ್ ರಚಿಸಲಾಗಿದೆ. ಕೊಳಚೆ ಪ್ರದೇಶಗಳಿಗೆ ಪ್ರತ್ಯೇಕ ಬ್ಲಾಕ್ ರಚಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು ೪೧೬೧ ಗಣತಿದಾರರನ್ನು ಮತ್ತು ೯೨೬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಸಾರ್ವಜನಿಕರು ನಿಮ್ಮ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಸರಳ ೩೩ ಪ್ರಶ್ನೆಗಳಿಗೆ ಮಾಹಿತಿ ನೀಡುವುದರೊಂದಿಗೆ ಭಾರತ ಜನಗಣತಿ-೨೦೨೭ ನೇದ್ದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಏ.೧ ರಿಂದ ೧೫ರವರೆಗೆ ಸ್ವಯಂ ಗಣತಿ ಕಾರ್ಯದಲ್ಲಿ ಸಾರ್ವಜನಿಕರು ನೇರವಾಗಿ ಪಾಲ್ಗೊಳ್ಳಬಹುದಾಗಿದೆ. ಇದರಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲು ಮತ್ತು ನಿಮ್ಮ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಮಾಹಿತಿ ನೀಡುವುದರೊಂದಿಗೆ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶ, ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಪ್ರಧಾನ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ವಿಜಯಪುರ ನಗರ ವ್ಯಾಪ್ತಿಗೆ ಮಹಾನಗರ ಪಾಲಿಕೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿಗಳಾಗಿರುತ್ತಾರೆ.
ಅಪರ ಜಿಲ್ಲಾಧಿಕಾರಿಗಳು ಜಿಲ್ಲೆಯ ಜನಗಣತಿ ಅಧಿಕಾರಿಗಳಾಗಿತ್ತಾರೆ. ವಿಜಯಪುರ, ಇಂಡಿ ಉಪವಿಭಾಗಾಧಿಕಾರಿಗಳು ಉಪವಿಭಾಗ ಮಟ್ಟದ ಚಾರ್ಜ್ ಅಧಿಕಾರಿಗಳಾಗಿದ್ದು, ತಾಲೂಕು ಮಟ್ಟದಲ್ಲಿ (ಗ್ರಾಮೀಣ ಪ್ರದೇಶ) ತಹಸೀಲ್ದಾರ್‌ರು, ನಗರ ಪ್ರದೇಶಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ.
ತಾಲೂಕು ಮಟ್ಟದಲ್ಲಿ (ಗ್ರಾಮೀಣ ಪ್ರದೇಶ)-೧೩ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ -೧೪ ಮತ್ತು ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ -೪ ಹೀಗೆ ಜಿಲ್ಲೆಯಲ್ಲಿ ಒಟ್ಟು -೩೧ ಚಾರ್ಜ್ಗಳನ್ನು ರಚಿಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಸಂಪೂರ್ಣ ಡಿಜಿಟಲ್ ಮೋಡ್‌ನಲ್ಲಿ ನಡೆಯುವ ಪ್ರಥಮ ಜನಗಣತಿ ಇದಾಗಿದ್ದು, ತನ್ಮೂಲಕ ನಮ್ಮ ಜನಗಣತಿ, ನಮ್ಮ ಭವಿಷ್ಯ ಭಾರತ ಜನಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ನಗರ ಚಾರ್ಜ್ ಅಧಿಕಾರಿಗಳ ಬಬಲೇಶ್ವರದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಪ್ರೀತಿ ಮೊ:೮೯೭೦೭೧೬೫೮೨, ತಿಕೋಟ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ರಾಘು ನಡುವಿನಮನಿ ಮೊ:೮೬೧೮೯೯೦೫೮೮, ಬಸವನ ಬಾಗೇವಾಡಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ವಿದ್ಯಾಧರ ಕಲಾದಗಿ ಮೊ:೯೪೪೯೧೪೨೦೬೬, ಮನಗೂಳಿಯ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ನಿಖಿಲೇಶ್ ಪಾಟೀಲ ಮೊ:೭೦೧೯೦೯೫೮೧೧, ಕೋಲ್ಹಾರದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವೀರೇಶ್ ಬಿ. ಹಟ್ಟಿ ಮೊ: ೯೮೮೦೭೨೬೦೧೭, ನಿಡಗುಂದಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಪ್ರತಾಪ್ ಆರ್ ಕೊಡಗೆ ಅವರ ಮೊ:೯೩೫೩೦೮೨೭೨೫, ಮುದ್ದೇಬಿಹಾಳ ತಾಲೂಕಿನ ಪುರಸಭೆಯ ಮುಖ್ಯ ಅಧಿಕಾರಿಗಳಾದ ಮಲ್ಲನಗೌಡ ಬಿರಾದರ ಮೊ.೯೬೮೬೯೩೯೨೬೭, ನಾಲತವಾಡ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಈರಣ್ಣ ಕನ್ನೂರ ಮೊ.೮೬೧೮೪೯೮೪೪೮, ತಾಳಿಕೋಟಿ ತಾಲೂಕ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವಸಂತ ಟಿ. ಪವಾರ ಮೊ.೯೬೧೧೦೭೩೪೬೮, ಇಂಡಿ ತಾಲೂಕಿನ ನಗರಸಭೆಯ ಮುಖ್ಯ ಅಧಿಕಾರಿಗಳಾದ ಎಸ್.ಎಸ್ ಪೂಜಾರಿ ಮೊ.೮೧೪೭೪೪೪೯೧೬, ಚಡಚಣ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಬಿ.ಕೆ ತಾವಸೆ ಮೊ.೮೯೭೧೨೪೮೮೪೯, ಸಿಂದಗಿ ತಾಲೂಕ ನಗರಸಭೆಯ ಮುಖ್ಯ ಅಧಿಕಾರಿಗಳಾದ ಎಸ್ ರಾಜಶೇಖರ ಮೊ.೯೦೦೮೨೨೪೭೭೩, ದೇವರ ಹಿಪ್ಪರಗಿ ತಾಲೂಕಿನ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಅಪ್ರೋಜ ಅಹಮದ್ ಪಟೇಲ ಮೊ.೯೦೩೬೬೭೬೫೫, ಆಲಮೇಲ ತಾಲೂಕಿನ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಸುರೇಶ್ ಡಿ. ನಾಯಕ ಮೊ. ೭೮೯೯೯೮೧೭೮೬,
ಗ್ರಾಮೀಣ ಚಾರ್ಜ್ ಅಧಿಕಾರಿಗಳಾದ ವಿಜಯಪುರದ ತಹಸೀಲ್ದಾರ್ ಪ್ರಶಾಂತ್ ಚನಗೊಂಡ ಮೊ, ೯೪ ೮೨೮೯೬೩೭೦, ಬಬಲೇಶ್ವರ ತಹಸೀಲ್ದಾರ್ ಶಾಂತಲಾ ಚಂದನ್ ಮೊ, ೯೯ ೦೨೧೦೩೭೫೭೭, ತಿಕೋಟಾ ತಹಸಿಲ್ದಾರ್ ಸುರೇಶ್ ಚೌವಲರ್ ಮೊ.೯೪೪೯೯೪೩೦೨೨, ಆಲಮೇಲ ತಹಸಿಲ್ದಾರ್ ಮಲ್ಲಿಕಾರ್ಜುನ ಅರಕೇಣಿ, ಮೊ, ೯೫೩೮೩೮೫೧೦೮, ಸಿಂದಗಿ ತಹಸಿಲ್ದಾರ್ ಕರೆಪ್ಪ ಬೆಳ್ಳಿ, ಮೊ.೮೧೦೫೭೬೮೬೭೧, ದೇವರ ಹಿಪ್ಪರಗಿ ತಹಸಿಲ್ದಾರ್ ನಿಂಗಪ್ಪ ಮೊ.೯೫೩೮೫೨೩೧೬೩, ಮುದ್ದೇಬಿಹಾಳ ತಹಸಿಲ್ದಾರ್ ಕೀರ್ತಿ ಚಳಕ ಮೊ.೮೮೬೧೪೩೮೫೫೪, ತಾಳಿಕೋಟೆ ತಹಸಿಲ್ದಾರ್ ವಿನಯ್ ಉಗಾರ ಮೊ.೮೮೫೧೫೪೨೭೩೯, ಚಡಚಣ ತಹಸಿಲ್ದಾರ್ ಎಸ್.ಬಿ.ಇಂಗಳೆ ಮೊ,೯೯೦೦೭೭೬೦೦೯, ಇಂಡಿ ತಹಸೀಲ್ದಾರ್ ಬಿ.ಎಸ್ ಕಡಕಬಾವಿ ಮೊ.೯೯೦೨೭೪೮೨೪೦, ಬಸವನ ಬಾಗೇವಾಡಿ ತಹಸೀಲ್ದಾರರಾದ ವೈ ಎಸ್. ಸೋಮನಕಟ್ಟಿ ಮೊ.೯೦೦೮೭೧೨೭೬೫, ಕೊಲ್ಹಾರ ತಾಲೂಕು ತಾಸಿಹಿಲ್ದಾರರಾದ ಸಂತೋಷ ಎಂ. ಮ್ಯಾಗೇರಿ ಮೊ.೮೦೫೦೦೬೯೩೧೬, ನಿಡಗುಂದಿ ತಾಲೂಕಿನ ತಹಸಿಲ್ದಾರರಾದ ಎ.ಡಿ. ಅಮರವದಗಿ ಮೊ.೯೪೮೨೨೬೮೫೩೩,
ಮಹಾನಗರ ಪಾಲಿಕೆ ಚಾರ್ಜ್ ಅಧಿಕಾರಿಗಳಾದ, ಮಹಾನಗರ ಪಾಲಿಕೆಯ ಚಾರ್ಜ್ -೧ರ ಒಲಯ ಆಯುಕ್ತರಾದ ಹುಚ್ಚೆಶ ಚಿತ್ತರಗಿ ಮೊ.೯೬೧೧೫೧೭೮೭೧,ಮಹಾನಗರ ಪಾಲಿಕೆಯ ಚಾರ್ಜ್ -೨ರ ಒಲಯ ಆಯುಕ್ತರಾದ ಮೋಹನ ವಿ. ಜಾದವ ಮೊ.೯೪೪೮೦೮೬೩೩೩, ಮಹಾನಗರ ಪಾಲಿಕೆಯ ಚಾರ್ಜ್ -೩ರ ಒಲಯ ಆಯುಕ್ತರಾದ ಶಿವಪ್ಪ ಅಂಬಿಗೇರ ಮೊ.೯೯೦೨೧೨೯೫೩೪, ಮಹಾನಗರ ಪಾಲಿಕೆಯ ನಗರ ಯೋಜನಾ ನಿರ್ದೇಶಕ ಜಂಟಿ ನಿರ್ದೇಶಕರಾದ ಚಾರ್ಜ್ -೪ರ ರಮೇಶ ಕೆ. ಸಿ ಮೊ.೯೪೪೯೫೧೫೮೦೮ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
