ಸಿಂದಗಿ: ರೈತರ ಹೊಲಗಳಲ್ಲಿ ಮಣ್ಣಿನ ಪರೀಕ್ಷೆ, ಕೀಟನಾಶಕ, ರಸಗೊಬ್ಬರ ಪ್ರಮಾಣದ ಬಗ್ಗೆ ನೇರವಾಗಿ ರೈತರಿಗೆ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೇಳೆ ಬೆಳವಣಿಗೆ, ಕೀಟ ಹಾಗೂ ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ, ಯಾಂತ್ರಿಕರಣ ಯೋಜನೆಯಡಿಯ ಪಲಾನುಭವಿಗಳಿಗೆ ವಿವಿಧ ಕೃಷಿ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ರೈತರು ಖರೀದಿ ಮಾಡಿದ ರಸಗೊಬ್ಬರಗಳಲ್ಲಿ ಮಿಶ್ರಣವಾಗಿರುವ ಸಾಂದ್ರತೆ ಪರಿಶೀಲನೆ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತನಿಗೆ ಕೃಷಿ ಸಂಜೀವಿನಿ ಯೋಜನೆ ಬಹಳ ಉಪಕಾರಿಯಾಗಿದ್ದು, ರೈತರಿಗೆ ಈ ಯೋಜನೆ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆ ಯೋಜನೆಯನ್ನು ರೂಪಿಸಿಕೊಂಡಿದೆ. ಆದ್ದರಿಂದ ರೈತರು ಕೃಷಿ ಸಂಜೀವಿನಿ ಯೋಜನೆಯ ಸದುಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಹಾಯಕ ಕೃಷಿ ನಿರ್ದೇಶಕರು, ಕ್ಷೇತ್ರದ ರೈತ ಪಲಾನುಭವಿಗಳು, ವಿವಿಧ ಅಧಿಕಾರಗಳು, ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

