ಮುದ್ದೇಬಿಹಾಳ: ಪಟ್ಟಣದಲ್ಲಿ ಕೆಲವು ದ್ವಿಚಕ್ರ ವಾಹನಗಳ ಸವಾರರು ತಮ್ಮ ವಾಹನಗಳ ಸೈಲೆನ್ಸ್ರ್ ನ್ನು ಬದಲಾಯಿಸಿ ವಿಚಿತ್ರವಾಗಿ ಶಬ್ಧಮಾಡುವ ಸೈಲೆನ್ಸ್ರ್ ನ್ನು ಅಳವಡಿಸಿ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿದ್ದು ಈ ಕೂಡಲೇ ತಮ್ಮ ಚಾಳಿಯನ್ನು ಬಿಟ್ಟು ವಾಹನಗಳ ಕಂಪನಿ ಜೊತೆಗೆ ಬರುವ ಸೈಲೆನ್ಸ್ರ್ ನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೇ ಎಫ್‌ಐಆರ್ ದಾಖಲಿಸುತ್ತೇನೆ ಎಂದು ಪಿಎಸ್‌ಐ ಸಂಜೀವ ತಿಪರೆಡ್ಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮಂಗಳವಾರ ವಿಚಿತ್ರವಾಗಿ ಶಬ್ಧಮಾಡುವ ಕೆಲ ವಾಹನಗಳನ್ನು ಸೀಜ್ ಮಾಡಿ ಸೈಲೆನ್ಸ್ರ್ ಗಳನ್ನು ಬಿಚ್ಚಿಸಿ ನಂತರ ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಹಲವಾರು ದೂರುಗಳು ಬಂದಿವೆ. ಕೆಲ ಯುವಕರು ಇದನ್ನು ಫ್ಯಾಶನ್ ಅನ್ಕೊಂಡಿದ್ದಾರೆ. ಆದರೆ ಇದು ಕಾನೂನು ಬಾಹಿರವಾಗಿದ್ದು ಇದರಿಂದ ಸಾರ್ವಜನಿಕರಿಗೆ ಉಪದ್ರವವಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಇಂತಹ ವಾಹನಗಳನ್ನು ಹೊಂದಿದವರು ಈ ಕೂಡಲೇ ಶಬ್ಧಮಾಲಿನ್ಯ ಮಾಡುವ ಸೈಲೆನ್ಸ್ರ್ ಗಳನ್ನು ಬದಲಾಯಿಸಿಕೊಳ್ಳಬೇಕು. ಇನ್ನು ಮುಂದೆ ಎಲ್ಲಿಯಾದರೂ ಇಂತಹ ವಾಹನಗಳು ಕಂಡಲ್ಲಿ ಯಾರೇ ಆದರೂ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವದಾಗಿ ಮತ್ತು ಇಂತಹ ಸೈಲೆನ್ಸ್ರ್ ನ್ನು ಮಾರಾಟ ಮಾಡುವದೂ ಕಾನೂನು ರೀತ್ಯ ಅಪರಾಧವಾಗಿದ್ದು, ಮಾರಾಟಗಾರರು ಮತ್ತು ಅವುಗಳನ್ನು ಅಳವಡಿಸುವ ಮೇಸ್ತಿçಗಳೂ ಸಹ ಎಚ್ಚೆತ್ತೊಕೊಳ್ಳಬೇಕು. ಇದನ್ನ ಮೀರಿದಲ್ಲಿ ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಶಬ್ದಮಾಲಿನ್ಯದ ಸೈಲೆನ್ಸರ್ ಕಂಡರೆ ಪ್ರಕರಣ ದಾಖಲು :ಪಿಎಸೈ ತಿಪರೆಡ್ಡಿ
Related Posts
Add A Comment