ವಿಜಯಪುರ: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ಗ್ರಾಮದ ೨೭ ವಯಸ್ಸಿನ ಅಭಿನಂದನ ತಂದೆ ದಿಲೀಪಕುಮಾರ ಕಾಸರ ಎಂಬ ವ್ಯಕ್ತಿ ಕಾಣೆಯಾಗಿದ್ದು, ವಿಜಯಪುರ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ ಎಂದು ಆದರ್ಶ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿ ಅಂದಾಜು ೨೭ ವರ್ಷ ವಯಸ್ಸು ಇದ್ದು, ಎತ್ತರ ೫.೫ ಅಡಿ, ಸಾಧಗೆಂಪು ಮೈಬಣ್ಣ, ಕಪ್ಪು ಕೂದಲು, ನೀಲಿ ಬಣ್ಣದ ಪ್ಯಾಂಟ್ ಕಾಲರಿನ ಟೀ ಶರ್ಟ್ ಧರಿಸಿದ್ದು, ಕನ್ನಡ, ಇಂಗ್ಲೀಷ ಮತ್ತು ಹಿಂದಿ ಭಾಷೆ ಮಾತನಾಡುವ ಈ ವ್ಯಕ್ತಿ ಕಂಡುಬಂದಲ್ಲಿ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ದೂ. ೦೮೩೫೨-೨೫೦೧೫೨, ಸಿಪಿಐ ಗೋಲಗುಂಬಜ್ ವೃತ್ತ ದೂ. ೦೮೩೫೨-೨೫೦೨೫೨ ಮತ್ತು ಆದರ್ಶ ನಗರ ಪೋಲಿಸ್ ಠಾಣೆ ದೂ.೦೮೩೫೨-೨೬೩೩೩೩ ಮೊ.೯೪೮೦೮೦೪೨೫೦ ಸಂಖ್ಯೆಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment