ವಿಜಯಪುರ: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಕಿತ್ತೂರು ಚನ್ನಮ್ಮ ಅವರು ಬ್ರಿಟಿಷ್ರ ವಿರುದ್ಧ ಹೋರಾಟ ನಡೆಸಿದರು. ಅವರ ಹೋರಾಟ,ತ್ಯಾಗ-ಬಲಿದಾನ ಹಾಗೂ ಅವರ ದೇಶ ಭಕ್ತಿ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.
ಐತಿಹಾಸಿಕ ಕಿತ್ತೂರು ಉತ್ಸವವು ಇದೇ ಅಕ್ಟೋಬರ್ ೨೩ ರಿಂದ ೨೫ ವರೆಗೆ ಕಿತ್ತೂರಿನಲ್ಲಿ ನಡೆಯುವುದು. ಕಿತ್ತೂರು ಉತ್ಸವದ ಅಂಗವಾಗಿ ಅಕ್ಟೋಬರ್ ೧೩ ರಂದು ಕಿತ್ತೂರು ಚನ್ನಮ್ಮಾಜಿಯವರ ವಿಜಯ ವೀರಜ್ಯೋತಿ ಯಾತ್ರೆಯು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಚನ್ನಮ್ಮಾಜೀಯವರ ವಿಜಯ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ವಿಜಯಪುರ ತಹಶೀಲ್ದಾರ ಶ್ರೀಮತಿ ಕವಿತಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಮುಖಂಡರಾದ ಶ್ರೀಶೈಲ್ ಬುಕ್ಕಣ್ಣಿ, ವಿಜಯ್ ಹಿರೊಳ್ಳಿ, ನಿಂಗನಗೌಡ ಸೋಲಾಪೂರ, ಸಿದ್ದು ಅವಟಿ, ಸಂದೀಪ ಇಂಡಿ, ಸದಾಶಿವ ಹಳ್ಳಿಗಿಡದ ಉಪಸ್ಥಿತರಿದ್ದರು.
Related Posts
Add A Comment