ಲೆಕ್ಕ ಪರಿಶೋಧಕ ಶಾಂತವೀರ ಮಣೂರ ಅವರಿಂದ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ಉಪನ್ಯಾಸ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಯುವ ಭಾರತ ಸಮಿತಿ, ವಿಜಯಪುರ ಇವರ ಸಹಯೋಗದಲ್ಲಿ ಅ.೧೯ ಗುರುವಾರ ಬೆಳಿಗ್ಗೆ ೧೦-೩೦ಕ್ಕೆ ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರವಿರುವ ಪ್ರವಾಸೋದ್ಯಮ ಇಲಾಖೆಯ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಛಾಯಾಗ್ರಾಹಕರಿಗಾಗಿ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ವಿಶೇಷ ಕಾರ್ಯಾಗಾರ, ಉಪನ್ಯಾಸ ಮತ್ತು ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ್ ಕಾರಜೋಳ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಪುರದ ಜಾರಿ ಸರಕುಗಳು ಮತ್ತು ಸೇವಾ ತೆರಿಗೆ ಇಲಾಖೆಯ ಸಿ.ಟಿ.ಓ. ಸುರೇಶ. ಎಂ. ಗೊಳಸಂಗಿ, ಲೆಕ್ಕ ಪರಿಶೋಧಕ ಶಾಂತವಿರೇಶ ಮಣೂರ ಮತ್ತು ಜಿಎಸ್‌ಟಿಪಿ ಸರಕುಗಳು ಮತ್ತು ಸೇವಾ ತೆರಿಗೆ ಸಲಹೆಗಾರ ಸಿದ್ದನಗೌಡ ಬಿರಾದಾರ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಛಾಯಾಗ್ರಾಹಕರು, ವಿಶೇಷವಾಗಿ ಸ್ಟುಡಿಯೋ ಮಾಲೀಕರು ಆಗಮಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಸತೀಶ ಕಲಾಲ ಪ್ರಕಟಣೆಯಲ್ಲಿ ಕೋರಿದ್ದಾರೆ.