ಮುದ್ದೇಬಿಹಾಳ: ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ತೀವ್ರ ಬರಗಾಲದಿಂದ ರೈತರು ತೊಂದರೆ ಅನಿಭವಿಸುವಂತಾಗಿದ್ದು, ಸೂಕ್ತವಾದ ಬರ ಪರಿಹಾರ ನೀಡಬೇಕು, ರೈತರ ಖುಷ್ಕಿ ಬೆಳೆಗೆ ಎಕರೆಗೆ ಕನಿಷ್ಠ ೧೦ಸಾವಿರ ಹಾಗೂ ನೀರಾವರಿ ಬೆಳೆಗೆ ಎಕರೆಗೆ ಕನಿಷ್ಟ ೨೫ಸಾವಿರ ರೂ ಪರಿಹಾರ ಘೋಷಿಸಿ ತುರ್ತು ಬಿಡುಗಡೆಗೆ ಕ್ರಮ ವಹಿಸಬೇಕು ಹಾಗೂ ದನಕರುಗಳಿಗೆ ಮೇವಿನ ಅಭಾವ ಇರುವದರಿಂದ ಮೇವು ಬ್ಯಾಂಕ್ ಆರಂಭಿಸಬೇಕು ಮತ್ತು ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಕೃಷಿ ಕಾರ್ಮಿಕರನ್ನು ಒದಗಿಸಬೇಕು, ಹಗಲಿನಲ್ಲಿ ನಿರಂತರವಾಗಿ ೭ತಾಸು ೩ಫೇಸ್ ವಿದ್ಯತ್ ನ್ನು ನೀರಾವರಿಗೆ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ, ತಹಶೀಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಲ್ಲ ರೈತಸಂಘಟನೆಗಳು ಸೇರಿ ಅಲ್ಲಿಂದ ಬಸವೇಶ್ವರ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೂ ಸಾಗಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ವಿಜಯಪುರ ರಸ್ತೆಯನ್ನು ಬಂದ್ ಮಾಡಿ ಕೆಲ ಕಾಲ ಪ್ರತಿಭಟಿಸಿದರು.
ತಹಶೀಲ್ದಾರ ಕಚೇರಿಯ ಎದುರು ಬಹಿರಂಗ ಸಭೆ ನಡೆಸಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಮತ್ತು ಕೆಇಬಿ ಎಇಇ ಆರ್.ಎನ್.ಹಾದಿಮನಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅರವಿಂದ ಕೊಪ್ಪ, ವಿಜಯ ಪೂಜಾರ, ಎಸ್.ಎಂ.ಮೇಟಿ, ಸಂಗಣ್ಣ ಬಾಗೇವಾಡಿ, ಹಣಂತ್ರಾಯಗೌಡ, ಕೆ.ಜಿ.ಚೌವ್ಹಾಣ, ಎನ್.ಎಸ್.ಬಿದರಕುಂದಿ, ಬಿ.ಜಿ.ಸಜ್ಜನ, ಎಸ್.ಆರ್.ಇಳಕಲ್, ಎಂ.ಆರ್.ಹಗರಗುಂಡ, ರುದ್ರಪ್ಪ ಅಗ್ನಿ ಸೇರಿದಂತೆ ಮತ್ತೀತರರು ಭಾಗಿಯಾದ್ದರು.
Related Posts
Add A Comment