ವಿಜಯಪುರ: ಲಚ್ಯಾಣ – ತಡವಾಳ ರೈಲು ನಿಲ್ದಾಣಗಳ ಮದ್ಯ ಕಿ ಮೀ ನಂ ೨೫೭/೭೦೦-೮೦೦ ರಲ್ಲಿ ಭೀಮಾ ನದಿ ರೈಲ್ವೆ ಬ್ರಿಡ್ಜ್ ಅಪ್ ಲೈನ್ ರೈಲು ಹಳೆಯ ಕೆಳಗೆ ಅನಾಮದೇವ್ ಶವ ಪತ್ತೆಯಾಗಿರುವ ಕುರಿತು ವಿಜಯಪುರ ರೇಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ಮಾಡಿಕೊಳ್ಳಲಾಗಿದೆ.
ಮೃತನು ವ್ಯಕ್ತಿ ಅಂದಾಜು ೪೦ ರಿಂದ ೪೫ ವರ್ಷದವನಾಗಿದ್ದು, ಸಾಧಾರಣ ಮೈಕಟ್ಟಿನವನಾಗಿದ್ದು ೫.೬” ಅಡಿ ಎತ್ತರ. ಕೋಲು ಮುಖ ಸಾದಗಪ್ಪ ಮೈಬಣ್ಣ. ನೆಟ್ಟನೆಯ ಮೂಗು. ತಲೆಯಲ್ಲಿ ಕಪ್ಪು. ಬಿಳಿ ಕೂದಲು ಇದ್ದು. ಒಂದು ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಅಂಗಿ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಅಥವಾ ವಾರಸುದಾರರು ಪತ್ತೆಯಾದಲ್ಲಿ ಆರಕ್ಷಕ ಉಪನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ೦೮೩೫೨-೨೫೦೮೮೩ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ವಿಜಯಪುರ ೦೮೦-೨೨೮೭೧೨೯೧ ಗೆ ಸಂಪರ್ಕಿಸುವಂತೆ ರೇಲ್ವೆ ಪೋಲಿಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Related Posts
Add A Comment