ವಿಜಯಪುರ: ಪದವಿ ಮಹಾವಿದ್ಯಾಲಯಗಳಿಗೆ ಮಾತ್ರ ಸೀಮಿತವಾದ ಘಟಿಕೋತ್ಸಗಳು ಐಟಿಐದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಐಟಿಐ ಪದವಿಧರರೆಂದು ಪರಿಗಣಿಸಿ ಘಟಿಕೋತ್ಸವ ಮೂಲಕ ಪ್ರಮಾಣ ಪತ್ರ ವಿತರಿಸಲು ಭಾರತ ಸರ್ಕಾರ ನಿರ್ದೇಶಿಸಿದ್ದು, ಐಟಿಐ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೀಳರಿಮೆಯನ್ನು ಬಿಟ್ಟು ತಾವೂ ಕೂಡ ಪದವೀಧರರೆಂಬ ಮನೋಭಾವನೆ ಬೆಳಿಸಿಕೊಂಡು, ಪಡೆದಿರುವ ಕೌಶಲ್ಯದ ಸದ್ಭಳಕೆ ಮಾಡಿಕೊಂಡು ಉದ್ಯೋಗಿಗಳಾಗುವಂತೆ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಪ್ರಾಚಾರ್ಯ ರಮೇಶ ದೇಸಾಯಿ ಕರೆ ನೀಡಿದರು.
ಇತ್ತೀಚೆಗೆ ವಿಜಯಪುರ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಐಟಿಐ ಪದವಿದರರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ಐಟಿಐ ತರಬೇತಿ ಪಡೆದು ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರುಡಸೆಟ್ ಸಂಸ್ಥೆ ನಿರ್ದೇಶಕ ಮುತ್ತಣ್ಣ ಧನಗರ ಅವರು ಭಾಗವಹಿಸಿ ಮಾತನಾಡಿದರು. ಉಪ ಪ್ರಾಚಾರ್ಯ ಪಿ.ಎಚ್.ಮಸೂತಿ, ಕಚೇರಿ ಅಧೀಕ್ಷಕರಾದ ಶ್ರೀಮತಿ ಶಶಿಕಲಾ ನಾಯ್ಕೋಡಿ, ಸಂಪನ್ಮೂಲ ವ್ಯಕ್ತಿಗಳು, ಐಟಿಐ ಪದವೀಧರರು ಮತ್ತು ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಕೌಶಲ್ಯಾಭಿವೃದ್ದಿ ಸದ್ಭಳಕೆಗೆಯಾಗಲಿ :ಪ್ರಾ. ದೇಸಾಯಿ
Related Posts
Add A Comment